News Karnataka Kannada
Monday, April 29 2024
ವಿದೇಶ

ಕಂದಕಕ್ಕೆ ಉರುಳಿದ ಪ್ರಯಾಣಿಕರ ಬಸ್- 20 ಸಾವು, 33 ಜನರಿಗೆ ಗಾಯ

Accident.
Photo Credit :

ಲಿಮಾ:  ಪ್ರಯಾಣಿಕರ ಬಸ್ ಸುಮಾರು 100 ಮೀಟರ್ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 33 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಗುರುವಾರ ದೃಢಪಡಿಸಿದ್ದಾರೆ.

ವರದಿಯ ಪ್ರಕಾರ, ಪಿಕಾಫ್ಲೋರ್ ಕಂಪನಿಗೆ ಸೇರಿದ ಅಂತರ್‌ ಪ್ರಾಂತೀಯ ಬಸ್, ತಯಾಬಾಂಬಾದಿಂದ ಲಾ ಲಿಬರ್ಟಾಡ್‌ನ ರಾಜಧಾನಿ ಟ್ರುಜಿಲ್ಲೊಗೆ ಹೋಗುತ್ತಿದ್ದಾಗ ಅದು ರಸ್ತೆಯಿಂದ ಜಾರಿ ಕಂದಕಕ್ಕೆ ಬಿದ್ದಿದೆ.

ತಯಾಬಾಂಬಾ ಮತ್ತು ಹುವಾನ್‌ಕಾಸ್‌ಪಾಟಾ ನಡುವಿನ ಗ್ರಾಮೀಣ ವಲಯದಲ್ಲಿ ಬುಧವಾರ ಸ್ಥಳೀಯ ಕಾಲಮಾನ ಸುಮಾರು 14:40 ಕ್ಕೆ ಅಪಘಾತ ಸಂಭವಿಸಿದೆ ಎಂದು ಪ್ರಾದೇಶಿಕ ಆರೋಗ್ಯ ಇಲಾಖೆ ತಿಳಿಸಿದೆ ಎಂದು ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹತ್ತಿರದ ಪಟ್ಟಣಗಳಲ್ಲಿ ವಾಸಿಸುವ ಜನರು ಗಾಯಗೊಂಡ ಪ್ರಯಾಣಿಕರ ಸಹಾಯಕ್ಕೆ ಬಂದಿದ್ದರು. ಅವರನ್ನು ತಯಾಬಾಂಬಾ, ಹುವಾನ್‌ಕಾಸ್‌ಪಾಟಾ ಮತ್ತು ಟ್ರುಜಿಲ್ಲೊದಲ್ಲಿನ ಆರೋಗ್ಯ ಕೇಂದ್ರಗಳಿಗೆ ದಾಖಲಿಸಿದ್ದರು.

ರಾಷ್ಟ್ರೀಯ ಪೊಲೀಸ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಸಿಬ್ಬಂದಿ ಶವಗಳನ್ನು ಹೊರತೆಗೆಯುವ ಮತ್ತು ತನಿಖೆಯನ್ನು ಪ್ರಾರಂಭಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು