ಪಶ್ಚಿಮ ಆಫ್ರಿಕಾದ ಫ್ರೀಟೌನ್ನಲ್ಲಿ ಭೀಕರ ಅವಘಡ ಸಂಭವಿಸಿದ್ದು, ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ತೈಲವನ್ನು ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ತೈಲ ಹೊರಚೆಲ್ಲಿದೆ. ತೈಲ ಸಂಗ್ರಹಿಸಲು ನೂರಕ್ಕೂ ಅಧಿಕ ಮಂದಿ ಮುಗಿಬಿದ್ದಿದ್ದು, ಈ ವೇಳೆ ಟ್ಯಾಂಕರ್ ಸ್ಫೋಟಗೊಂಡಿದೆ.
ತೈಲಕ್ಕಾಗಿ ಮುಗಿಬಿದ್ದ ನೂರಕ್ಕು ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಅತೀ ಹೆಚ್ಚು ಮಂದಿ ಇಲ್ಲಿ ತೈಲಕ್ಕಾಗಿ ಮುಗಿಬಿದ್ದ ಕಾರಣ ಸಾವಿನ ಸಂಖ್ಯೆ ನಿಖರವಾಗಿ ತಿಳಿದಿಲ್ಲ. ಫ್ರೀಟೌನ್ನ ಪೂರ್ವದ ಉಪನಗರ ವೆಲ್ಲಿಂಗ್ಟನ್ನಲ್ಲಿ ಘಟನೆ ಸಂಭವಿಸಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.