ಅಮೆರಿಕದ ವಿಸಕಾನ್ಸಿನ್ ರಾಜ್ಯದಲ್ಲಿ ಕ್ರಿಸ್ಮಸ್ ಮೆರವಣಿಗೆ ವೇಳೆ ಎಸ್ಯುವಿ ಕಾರ್ ನುಗ್ಗಿದ್ದು, ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಯಲ್ಲಿ ನಲವತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿಲ್ವಾಕೀ ಉಪನಗರ ವೌಕೇಶಾದಲ್ಲಿ ಕ್ರಿಸ್ಮಸ್ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಕೆಂಪು ಬಣ್ಣದ ಎಸ್ಯುವಿ ವೇಗವಾಗಿ ಬಂದಿದ್ದು, ಬ್ಯಾರಿಕೇಡ್ಗಳನ್ನು ಬೇಧಿಸಿ ಜನರ ಮಧ್ಯೆ ನುಗ್ಗಿದೆ.
ಎಸ್ಯುವಿ 20ಕ್ಕೂ ಹೆಚ್ಚು ಮಂದಿಗೆ ಡಿಕ್ಕಿ ಹೊಡೆದಿದ್ದು, ಇದರಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ.ಘಟನೆಯಲ್ಲಿ ಮಕ್ಕಳಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ರೀತಿ ಅಜಾಗರೂಕತೆಯಿಂದ ಕಾರ್ ಓಡಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.