ಬ್ರಿಟನ್ ರಾಣಿ ಎಲಿಜಬೆತ್ (95) ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದು ರಾತ್ರಿ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಈ ಬಗ್ಗೆ ಅರಮನೆ ಪ್ರಕಟಣೆ ಹೊರಡಿಸಿದ್ದು, ಪ್ರಾಥಮಿಕ ಆರೋಗ್ಯ ತಪಾಸಣೆಗಳ ಬಳಿಕ ಗುರವಾರ ವಿಂಡ್ಸರ್ ಕೋಟೆಯ ಮನೆಗೆ ಮರಳಿರುವುದಾಗಿ ತಿಳಿಸಿದೆ.
‘ಎಲಿಜಬೆತ್ ಅವರಿಗೆ ವಿಶ್ರಾಂತಿ ಯ ಅಗತ್ಯವಿದ್ದು, ಕೆಲವು ದಿನ ವಿಶ್ರಾಂತಿ ಪಡೆಯುವಂತೆ ಅವರ ವೈದ್ಯಕೀಯ ಸಿಬ್ಬಂದಿ ಸಲಹೆ ಮಾಡಿದ್ದಾರೆ ಹಾಗೂ ಅವರ ಅನಾರೋಗ್ಯವು ಕೋವಿಡ್-19ಗೆ ಸಂಬಂಧಿಸಿದಲ್ಲಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಮೂಲಗಳ ಪ್ರಕಾರ ಅವರು, ಸೆಂಟ್ರಲ್ ಲಂಡನ್ನ ಕಿಂಗ್ ಎಡ್ವರ್ಡ್ VII ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ. “ರಾಣಿ ಎಲಿಜಬೆತ್ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ. ಸ್ಥಿರವಾಗಿದೆ. ಗುರುವಾರ ರಾತ್ರಿ ವಿಂಡ್ಸರ್ನಲ್ಲಿ ಏರ್ಪಡಿಸಲಾದ ಪಾನೀಯ ಕೂಟದಲ್ಲಿ ಕೂಡ ಎಲಿಜಬೆತ್ ಭಾಗಿಯಾಗಿದ್ದರು. ಸಂತೋಷದಿಂದ ನಗುತ್ತ ಅತಿಥಿಗಳೊಂದಿಗೆ ಸಮಯ ಕಳೆದಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ರಾಣಿಯಾಗಿ ಅಧಿಕಾರವಹಿಸಿಕೊಂಡು ಮುಂದಿನ ವರ್ಷಕ್ಕೆ 70 ವರ್ಷ ಪೂರೈಸಲಿರುವ ಎಲಿಜಬೆತ್, 2013ರ ನಂತರ ಇದೇ ಮೊದಲ ಬಾರಿಗೆ ಒಂದು ರಾತ್ರಿ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. 2018ರಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಹಾಗೂ 2003ರಲ್ಲಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.