ಕೀವ್: ಇಂದು ಕೂಡ ರಷ್ಯಾ ಉಕ್ರೇನ್ ನ ಮೇಲೆ ಭೀಕರ ದಾಳಿ ನಡೆಸುತ್ತಿದ್ದು, ಉಕ್ರೇನ್ನ ಶಾಲಾ- ಕಾಲೇಜುಗಳ ಮೇಲೆ ರಷ್ಯಾ ಫಿರಂಗಿ ದಾಳಿ ನಡೆಸಿದೆ.
ಉಕ್ರೇನ್ ನ ಶಾಲಾ- ಕಾಲೇಜುಗಳ ಮೇಲೂ ರಷ್ಯಾ ದಾಳಿ ನಡೆಸಿದೆ.ಇದರಲ್ಲಿ 10 ಮಕ್ಕಳ ಸಾವನ್ನಪ್ಪಿದ್ದು, ಉಕ್ರೇನ್ನ 6 ಶಾಲೆಗಳು ಧ್ವಂಸವಾಗಿದೆ. ರಷ್ಯಾ ಉಕ್ರೇನ್ನ ನಾಗರಿಕ ಪ್ರದೇಶಗಳನ್ನು ಹೆಚ್ಚು ಗುರಿಯಾಗಿಸಿಕೊಂಡಿದೆ. ಈಗಾಗಲೇ ಉಕ್ರೇನ್ನ ಮಿಲಿಟರಿ ನೆಲೆಗಳ ರಷ್ಯಾ ಫಿರಂಗಿ ದಾಳಿ ನಡೆಸಿದೆ. ಈ ವೇಳೆ ಉಕ್ರೇನ್ನ 70 ಸೈನಿಕರ ಹತ್ಯೆ ಮಾಡಲಾಗಿದೆ.
ರಷ್ಯಾ ಸೇನೆಯೂ ಉಕ್ರೇನ್ ಮೇಲೆ ಇನ್ನಷ್ಟು ಭೀಕರ ದಾಳಿಗೆ ಸಿದ್ಧತೆ ನಡೆಸಿದ್ದು, ರಾಜಧಾನಿ ಕೀವ್ ಹೊರಭಾಗದಲ್ಲಿ 40 ಮೈಲಿಯಷ್ಟು ಮಿಲಿಟರಿ ವಾಹನಗಳ ಸಾಲು ನಿಂತಿವೆ. ಯಾವುದೇ ಕ್ಷಣದಲ್ಲಾದರೂ ಉಕ್ರೇನ್ ಮೇಲೆ ಇನ್ನಷ್ಟು ಭೀಕರ ದಾಳಿ ನಿರೀಕ್ಷೆಯಿದೆ.