ಈಶಾನ್ಯ ಬ್ರೆಜಿಲಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಪ್ರವಾಹದಿಂದ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮಂದಿ ನೆಲೆ ಕಳೆದುಕೊಂಡಿದ್ದಾರೆ. ಅಲ್ಲದೇ ಬಹಿಯಾ ರಾಜ್ಯದ 116 ನಗರಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಬ್ರೆಜಿಲ್ಮ ಉತ್ತರ ಮತ್ತು ಆಗ್ನೇಯ ಪ್ರಾಂತ್ಯದ ಇತರ ಐದು ರಾಜ್ಯಗಳಲ್ಲಿಯೂ ಪ್ರವಾಹ ಉಂಟಾಗಿದ್ದು,ಜನ ತತ್ತರಿಸಿದ್ದಾರೆ.
ಪ್ರವಾಹವು ಐದು ಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿದ್ದು,50 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ.
400 ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಕೊರೋನಾ ಭೀತಿಯೂ ಹೆಚ್ಚಿದ್ದು, ಕೆಲವು ನಗರಗಳಲ್ಲಿ ಪ್ರವಾಹದಿಂದ ಲಸಿಕೆಗಳು ಕಳೆದುಹೋಗಿವೆ, ನಗರಸಭೆಯ ಕೆಲ ಆರೋಗ್ಯ ಕಚೇರಿಗಳು, ಔಷಧ ಕೇಂದ್ರಗಳು ಸಂಪೂರ್ಣ ಜಲಾವೃತಗೊಂಡಿವೆ.