ಇರಾಕ್ ಪ್ರಧಾನಿ ಮುಸ್ತಾಫಾ ಅಲ್- ಕಾಧಿಮಿ ಅವರ ಅಧಿಕೃತ ನಿವಾಸದ ಮೇಲೆ ಡ್ರೋನ್ ದಾಳಿಯ ಯತ್ನ ನಡೆದಿದೆ. ಭಾನುವಾರ ಮುಂಜಾನೆ ಡ್ರೋನೊಂದು ಕಾಧಿಮಿ ನಿವಾಸವನ್ನು ಗುರಿಯಾಗಿಸಿ ದಾಳಿಗೆ ಯತ್ನಿಸಿತು. ಆದರೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಕಾಧಿಮಿ ಅಧಿಕೃತ ಟ್ವಿಟರ್ ಖಾತೆ ಮೂಲಕ ಪ್ರಧಾನಿ ಆರೋಗ್ಯವಾಗಿದ್ದಾರೆ ಹಾಗೂ ಶಾಂತಿ ಕಾಪಾಡಿಕೊಳ್ಳಲು ಕರೆ ನೀಡಿದ್ದಾರೆ ಎಂದು ತಿಳಿಸಿದೆ.ಈ ದಾಳಿಯ ಹೊಣೆಯನ್ನು ಇದುವರೆಗೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.
ಕಳೆದ ತಿಂಗಳು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ವಿರೋಧಿಸಿ ಇರಾನ್ ಪರ ಗುಂಪುಗಳ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದರು.