News Karnataka Kannada
Monday, April 29 2024
ವಿದೇಶ

ಆಸ್ಟ್ರೇಲಿಯಾದ ನೂತನ ಪ್ರಧಾನ ಮಂತ್ರಿಯಾಗಿ ಆಂಥೋನಿ ಅಲ್ಬನೀಸ್ ಪ್ರಮಾಣ ವಚನ ಸ್ವೀಕಾರ

Anthoni
Photo Credit :

ಕ್ಯಾನ್‌ಬೆರಾ (ಆಸ್ಟ್ರೇಲಿಯಾ): ಲೇಬರ್ ಪಕ್ಷದ ನಾಯಕ ಆಂಥೋನಿ ಅಲ್ಬನೀಸ್ ಅವರು ಆಸ್ಟ್ರೇಲಿಯಾದ 31 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಆಂಥೋನಿ ಅಲ್ಬನೀಸ್ ಟೋಕಿಯೊದಲ್ಲಿ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಭಾಗವಹಿಸುವ ಮುನ್ನ ದೇಶದ ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದೇ ವೇಳೆ ಲೇಬರ್ ಸೆನೆಟರ್ ಪೆನ್ನಿ ವಾಂಗ್ ವಿದೇಶಾಂಗ ಸಚಿವರಾಗಿ, ರಿಚರ್ಡ್ ಮಾರ್ಲ್ಸ್ ಉಪ ಪ್ರಧಾನ ಮಂತ್ರಿಯಾಗಿ, ಜಿಮ್ ಚಾಲ್ಮರ್ಸ್ ಖಜಾಂಚಿಯಾಗಿ ಮತ್ತು ಕೇಟಿ ಗಲ್ಲಾಘರ್ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಲ್ಬನೀಸ್ ಟ್ವೀಟ್‌ ಮಾಡಿ, ‘ಆಸ್ಟ್ರೇಲಿಯದ ಪ್ರಧಾನಿಯಾಗಿ ಸೇವೆ ಸಲ್ಲಿಸಲು ನನಗೆ ಗೌರವವಿದೆ. ನಾನು ಜನರನ್ನು ಒಟ್ಟುಗೂಡಿಸಲು ಮತ್ತು ಆಸ್ಟ್ರೇಲಿಯಾದ ಜನರಂತೆ ಧೈರ್ಯಶಾಲಿ, ಕಠಿಣ ಪರಿಶ್ರಮ ಮತ್ತು ಕಾಳಜಿಯುಳ್ಳ ಸರ್ಕಾರವನ್ನು ಮುನ್ನಡೆಸಲು ಬಯಸುತ್ತೇನೆಎಂದು ಬರೆದುಕೊಂಡಿದ್ದಾರೆ.

ಆಲ್ಬನೀಸ್ ಶನಿವಾರ ರಾತ್ರಿ ಚುನಾವಣೆಯಲ್ಲಿ ವಿಜಯ ಸಾಧಿಸಿದರು. ಒಂಬತ್ತು ವರ್ಷಗಳ ನಂತರ ಅಧಿಕಾರಕ್ಕಾಗಿ ಅವರ ಕಾಯುವಿಕೆಯನ್ನು ಕೊನೆಗೊಳಿಸಿದರು. ಇದರೊಂದಿಗೆ ಆಂಥೋನಿ ಅಲ್ಬನೀಸ್ ದೇಶದ 31 ನೇ ಪ್ರಧಾನ ಮಂತ್ರಿಯಾದರು. ಚುನಾವಣೆಯಲ್ಲಿ ಗೆದ್ದ ನಂತರ, ಆಂಟನಿ ಅಲ್ಬನೀಸ್ ತನಗೆ ಮತ ಹಾಕಿದ ಜನರಿಗೆ ಧನ್ಯವಾದ ಅರ್ಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು