News Karnataka Kannada
Monday, May 13 2024
ವಿದೇಶ

ಆಸ್ಟ್ರೇಲಿಯಾದಲ್ಲಿ ಅಪರೂಪದ ನಡೆದಾಡುವ ಮೀನು ಪತ್ತೆ

Walking Fish
Photo Credit :

ಆಸ್ಟ್ರೇಲಿಯಾ : ಟಾಸ್ಮೇನಿಯನ್ ಕರಾವಳಿಯ ಬಳಿ 22 ವರ್ಷಗಳ ಬಳಿಕ ಅಪರೂಪದ ನಡೆದಾಡುವ ಮೀನು ಪತ್ತೆಯಾಗಿದೆ. ಆಸ್ಟ್ರೇಲಿಯಾದ ಕಾಮನ್​ವೆಲ್ತ್​ ಸೈಂಟಿಫಿಕ್​ ಆಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ ಆರ್ಗನೈಸೇಶನ್​​ನ ಸಂಶೋಧಕರ ತಂಡ ಈ ಮೀನನ್ನು ಪತ್ತೆ ಮಾಡಿದೆ. 1999ರಲ್ಲಿ ಈ ಗುಲಾಬಿ ಹ್ಯಾಂಡ್​ ಫಿಶ್​ ಕಂಡುಬಂದಿದ್ದು, ಅದರ ಬಳಿಕ ಇದೀಗ ಕಾಣಿಸಿಕೊಂಡಿದೆ. ಪುಟ್ಟ ಕೈಗಳ ಮೂಲಕ ಸಮುದ್ರದಲ್ಲಿ ನಡೆದಾಡುವ ಈ ಮೀನು ತಿಳಿ ಗುಲಾಬಿ ಬಣ್ಣದಲ್ಲಿ ಇರುತ್ತದೆ. ಆಂಗ್ಲರ್​ ಫಿಶ್​ ಎನ್ನುವ ಕುಟುಂಬಕ್ಕೆ ಈ ಗುಲಾಬಿ ಹ್ಯಾಂಡ್​ ಫಿಶ್​ ಸೇರಿದೆ. ಅಷ್ಟಾಗಿ ಕಣ್ಣಿಗೆ ಈ ಮೀನುಗಳು ಕಾಣಿಸಿಕೊಳ್ಳದ ಕಾರಣದ ಅಳಿವಿನಂಚಿನಲ್ಲಿರುವ ಜೀವಿ ಎಂದು ಸಂಶೋಧಕರು ಹೇಳಿದ್ದಾರೆ.

ಫೆಬ್ರುವರಿಯಲ್ಲಿ ಸಂಶೋಧಕರ ತಂಡ ಟಾಸೈನ್​ ಸಮುದ್ರದ ಒಳಗೆ ಕ್ಯಾಮಾರಾವನ್ನು ಇಳಿಸಿದ್ದರು. 4 ಸಾವಿರ ಮೀಟರ್​ ಅಡಿಯವರೆಗೆ ಕ್ಯಾಮರಾವನ್ನು ಇಳಿಬಿಟ್ಟಿದ್ದರು . ಒಂದು ವರ್ಷದ ನಂತರ ಕ್ಯಾಮರಾವನ್ನು ಹೊರತೆಗೆದು ದೃಶ್ಯಗಳನ್ನು ಪರೀಕ್ಷಿಸಿದಾಗ ಗುಲಾಬಿ ಹ್ಯಾಂಡ್​ ಫಿಶ್​ ನೋಡಿ ಸಂತಸಗೊಂಡಿದ್ದಾರೆ. ಈ ಮೊದಲು ಗುಲಾಬಿ ಹ್ಯಾಂಡ್​ ಫಿಶ್ ಸಮುದ್ರದ ಆಳದಲ್ಲಿ ಕಂಡುಬರುತ್ತದೆ ಎನ್ನಲಾಗಿತ್ತು. ಆದರೆ ಈ ಬಾರಿ ಕೇವಲ 150 ಅಡಿ ಆಳದಲ್ಲಿ ಕಂಡುಬಂದಿದೆ.

ಸಮುದ್ರದ ತಳದಲ್ಲಿ ನಡೆದಾಡಲು ಪುಟ್ಟ ಕೈಗಳನ್ನು ಹೊಂದಿರುವ ಈ ಮೀನು, ತಿಳಿ ಗುಲಾಬಿ ಬಣ್ಣದಲ್ಲಿದ್ದು ನೋಡಲೂ ಆಕರ್ಷಕವಾಗಿದೆ. ಸದ್ಯ ಸಂಶೋಧಕರ ತಂಡ ಗುಲಾಬಿ ಹ್ಯಾಂಡ್​ ಫಿಶ್ ಕಾಣಿಸಿಕೊಂಡ 35 ಸೆಕೆಂಡುಗಳ ವೀಡಿಯೋವನ್ನು ಅಧಿಕೃತ್ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು