ಲಂಡನ್: ಭಯೊತ್ಪಾದಕತೆ ವಿರುದ್ಧ ಹೋರಾಟ ನಡೆಸಿ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಪಾಕಿಸ್ತಾನ ಮೂಲದ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ಝಾಯ್ ಸದ್ಯ ತಾಲಿಬಾನ್ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಹಿಜಾಬ್ ಕಡ್ಡಾಯಗೊಳಿಸಿ ತಾಲಿಬಾನ್ ಆದೇಶ ಹೊರಡಿಸಿತ್ತು.
ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಲಾಲ ಇದು ಮಹಿಳೆಯರನ್ನು ಕೆಲಸದಿಂದ ದೂರವಿಡಲು ಈ ತಂತ್ರ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ತಾಲಿಬಾನ್ , ಅಫ್ಘಾನಿಸ್ತಾನದ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ಅಳಿಸಲು ಹೊರಟಿದೆ. ಹೆಣ್ಣು ಮಕ್ಕಳನ್ನು ಶಾಲೆಯಿಂದ ಹೊರಗಿಡಲು ಹಾಗೂ ಮಹಿಳೆಯರನ್ನು ಕೆಲಸದಿಂದ ದೂರವಿಡಲು ಒಟ್ಟಾರೆ ಸಂಪೂರ್ಣವಾಗಿ ಮಹಿಳೆಯರನ್ನು ಅಳಿಸಿಹಾಕಲು ಈ ನಿಯಮ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಅಫ್ಘಾನಿಸ್ತಾನದಲ್ಲಿ ಕುಟುಂಬದ ಪುರುಷರಿಲ್ಲದೇ ಮಹಿಳೆಯರು ಎಲ್ಲೂ ಪ್ರಯಾಣಿಸುವಂತೆಯೂ ಇಲ್ಲ, ಮನೆಯಿಂದ ಹೊರಬಂದಾಗ ಸಂಪೂರ್ಣವಾಗಿ ತಮ್ಮ ಮುಖ ಸೇರಿದಂತೆ ದೇಹವನ್ನು ಮುಚ್ಚಬೇಕೆಂಬ ಕಠಿಣ ನೀತಿಯನ್ನು ತಾಲಿಬಾನ್ ಸರ್ಕಾರ ಜಾರಿಗೊಳಿಸಿದೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕತೆ ವಿರುದ್ಧ ಹೋರಾಡಿ, ಭಯೋತ್ಪಾದಕರಿಂದ ಹಲ್ಲೆಗೊಳಗಾದ ಬಳಿಕ ಹೆಣ್ಣುಮಕ್ಕಳ ಪರ ಹೋರಾಟಗಾರ್ತಿ ಮಲಾಲ ಸದ್ಯ ಲಂಡನ್ನಲ್ಲಿ ನೆಲೆಸಿದ್ದಾರೆ.