News Karnataka Kannada
Monday, May 06 2024
ವಿದೇಶ

ಅಫ್ಘಾನಿಸ್ತಾನದ ಕಾಬೂಲ್ ಸೇನಾ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟ

Afghan
Photo Credit :

ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತೆ ಸರಣಿ ಬಾಂಬ್‌ ಸ್ಫೋಟಿಸಲಾಗಿದ್ದು, ಆರಂಭಿಕ ವರದಿಗಳ ಪ್ರಕಾರ, ಈ ಸ್ಫೋಟದಲ್ಲಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ.

ಕಾಬೂಲ್‌ನ ಮಿಲಿಟರಿ ಆಸ್ಪತ್ರೆಯ ಹೊರಗೆ ಈ ಸ್ಪೋಟ ಸಂಭವಿಸಿದ್ದು, ಸ್ಫೋಟದ ನಂತ್ರ ಗುಂಡಿನ ಸದ್ದು ಕೂಡ ಕೇಳಿ ಬಂದಿದೆ. ಎಎಫ್‌ಪಿ ಸುದ್ದಿ ಸಂಸ್ಥೆಈ ಮಾಹಿತಿ ನೀಡಿದೆ.

 ಕಾಬೂಲ್ ನಗರದ ಸರ್ದಾರ್ ಮೊಹಮ್ಮದ್ ದಾವೂದ್ ಖಾನ್ ಮಿಲಿಟರಿ ಆಸ್ಪತ್ರೆಯ ಬಳಿ ಮಂಗಳವಾರ ಎರಡು ಸ್ಫೋಟಗಳು ಸಂಭವಿಸಿದ್ದು, ನಂತರ ಗುಂಡಿನ ದಾಳಿ ನಡೆಯಿತು. ಸ್ಥಳದ ಸುತ್ತಲೂ ವಾಸಿಸುವ ಜನರು ಹಂಚಿಕೊಂಡ ಫೋಟೋಗಳಲ್ಲಿ ಸ್ಫೋಟದ ನಂತ್ರ ಹೊಗೆಯನ್ನ ಕಾಣಬಹುದು.

ಕಾಬೂಲ್ʼನ ಸರ್ದಾರ್ ಮೊಹಮ್ಮದ್ ದಾವೂದ್ ಖಾನ್ ಮಿಲಿಟರಿ ಆಸ್ಪತ್ರೆಯ ಹೊರಗೆ ನಾಗರಿಕರನ್ನು ಗುರಿಯಾಗಿಸಿಕೊಂಡು ಸ್ಫೋಟ ಸಂಭವಿಸಿದೆ ಎಂದು ತಾಲಿಬಾನ್ ಉಪ ವಕ್ತಾರ ಬಿಲಾಲ್ ಕರಿಮಿ ಅಸೋಸಿಯೇಟೆಡ್ ಪ್ರೆಸ್ (ಎಪಿ)ಗೆ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಮತ್ತೊಂದು ಸ್ಫೋಟವನ್ನ ದೃಢೀಕರಿಸಲಿಲ್ಲ, ಮತ್ತು ಘಟನೆಯ ಜವಾಬ್ದಾರಿಯನ್ನ ಯಾವುದೇ ಸಂಸ್ಥೆ ತೆಗೆದುಕೊಂಡಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು