ಕಾಬೂಲ್: ಅಫ್ಗಾನಿಸ್ತಾನ ‘ರಾಜಧಾನಿ ಖ್ವಾಲಾ-ಇ-ನವ್’ನಿಂದ ಪೂರ್ವಕ್ಕೆ ಖ್ವಾಡಿಸ್ ಜಿಲ್ಲೆಯ ಬದ್ರುಕ್, ದರ್ಬಾಂದ್-ಇ-ಸಫೇದ್ ಮತ್ತು ಖಾಕ್ ಪೊಲಾಕ್ ಪ್ರದೇಶಗಳಲ್ಲಿ ಭೂಮಿ ಬಡ್ಘಿಸ್ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಭೂಕಂಪನದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 4:10ರ ಸುಮಾರಿಗೆ ಸಂಭವಿಸಿದ ಭೂಕಂಪನದಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
‘ಖ್ವಾಲಾ-ಇ-ನವ್’ನಿಂದ 40 ಕಿ.ಮೀ. ಪೂರ್ವಕ್ಕೆ, ತುರ್ಕ್ಮೆನಿಸ್ತಾನ್ ಜತೆ ಗಡಿ ಹಂಚಿಕೊಂಡಿರುವ ಬಡ್ಘಿಸ್ನಲ್ಲಿ 5.6 ತೀವ್ರತೆಯ ಭೂಕಂಪನ ಸಂಭವಿಸಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಹಲವು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದೂ ಮೂಲಗಳು ಹೇಳಿವೆ.