News Karnataka Kannada
Friday, May 03 2024
ವಿದೇಶ

ವೀಸಾ ಕಚೇರಿ ಟಿವಿಯಲ್ಲಿ ಇದ್ದಕ್ಕಿದ್ದಂತೆ ಪ್ರಸಾರವಾದ ಅಶ್ಲೀಲ ಸಿನಿಮಾ

Karachii
Photo Credit : Twitter

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಇಂಗ್ಲೆಂಡ್‌ ವೀಸಾ ಕಚೇರಿಯ ಟಿವಿ ಸ್ಕ್ರೀನ್‌ನಲ್ಲಿ ಅಶ್ಲೀಲ ವಿಡಿಯೊ ಪ್ರಸಾರವಾಗಿ ಅಲ್ಲಿದ್ದ ಜನತೆ ಒಂದು ಕ್ಷಣ ಆಘಾತಕ್ಕೊಳಗಾದ ಘಟನೆ ನಡೆದಿದೆ. ಈ ದೃಶ್ಯ ಕೆಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿ ವೈರಲ್‌ ಆಗಿದೆ.

ಗೆರ್ರಿಯ ವೀಸಾ ಕೇಂದ್ರದಲ್ಲಿ ಈ ಮುಜುಗರದ ಘಟನೆ ನಡೆದಿದೆ. ಮಹಿಳೆಯರು ಮತ್ತು ಭದ್ರತಾ ಸಿಬ್ಬಂದಿ ನೋಡುತ್ತಿರುವಂತೆಯೇ ಈ ದೃಶ್ಯ ಪ್ರಸಾರವಾಗಿದೆ. ಸ್ವಲ್ಪ ಹೊತ್ತಿನಲ್ಲಿ ಕಚೇರಿಯ ಸಿಬ್ಬಂದಿ ಟಿವಿ ಸ್ವಿಚ್‌ ಆಫ್‌ ಮಾಡಿದರು. ಕರಾಚಿಯ ವೀಸಾ ಕಚೇರಿಗೆ ಆಗಮಿಸಿದ್ದ ಜನರಿಗೆ ಅನುಕೂಲವಾಗಲೆಂದು ಕಾರ್ಯವಿಧಾನವನ್ನು ಟಿವಿಯಲ್ಲಿ ಪ್ರದರ್ಶಿಸಲಾಗುತ್ತದೆ. ಅದರಂತೆ ದೃಶ್ಯ ಪ್ರಸಾರವಾಗಿತ್ತಿತ್ತು.

ಈ ವಿಡಿಯೊವನ್ನು ಹೈಲೈಟ್‌ ಮಾಡಲು ಕೆಮೆರಾ ಜೂಮ್ ಮಾಡಲಾಗಿದೆ. ಆಗ ಇದ್ದಕ್ಕಿದ್ದಂತೆ ದೊಡ್ಡ ಸ್ಕ್ರೀನ್‌ ಮೇಲೆ ಅಶ್ಲೀಲ ವಿಡಿಯೊ ಪ್ರಸಾರವಾಗಿದೆ. ಇದನ್ನು ನೋಡುತ್ತಿದ್ದಂತೆ ಅಲ್ಲಿದ್ದವರು ಒಂದು ಕ್ಷಣ ಶಾಕ್‌ಗೆ ಒಳಗಾದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು