ನೈಜೀರಿಯಾ: ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟಗೊಂಡು ಮೂವರು ಮಕ್ಕಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ. ಒಂಡೋ ರಾಜ್ಯದ ಲಾಗೋಸ್-ಬೆನಿನ್ ಹೆದ್ದಾರಿ ಬಳಿ ಘಟನೆ ನಡೆದಿದೆ. ಮೂವರು ಮಕ್ಕಳು ಸೇರಿ 20 ಜನ ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.
ತೈಲ ಟ್ಯಾಂಕರ್ ಸ್ಫೋಟದಿಂದ ಮನೆಗಳಿಗೆ ಬೆಂಕಿ ಹರಡಿ ದುರಂತ ಸಂಭವಿಸಿದೆ. ಲಾಗೋಸ್-ಬೆನಿನ್ ಎಕ್ಸ್ಪ್ರೆಸ್ವೇಯಲ್ಲಿ ಸಂಭವಿಸಿದ ಸ್ಫೋಟವು ದಟ್ಟವಾದ ಕಪ್ಪು ಹೊಗೆಯೊಂದಿಗೆ ಭಾರಿ ಬೆಂಕಿಯನ್ನು ಉಂಟುಮಾಡಿತು, ಅದು ಇಡೀ ಪ್ರದೇಶವನ್ನು ಆವರಿಸಿದೆ ಎಂದು ವರದಿಯಾಗಿದೆ.