ಬ್ಯಾಂಕಾಕ್: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮಸೂದೆ ಥಾಯ್ಲೆಂಡ್ ಸಂಸತ್ತಿನಲ್ಲಿ ಅನುಮೋದನೆಗೊಂಡಿದೆ. ಇದರ ಅಡಿಯಲ್ಲಿ ವಿವಾಹಿತರಿಗೆ ಲಿಂಗಬೇಧವಿಲ್ಲದೆ ಸಿಗಬೇಕಾದ ಹಕ್ಕುಗಳು ಸಿಗಲಿದೆ. ಈ ಮೂಲಕ ಥಾಯ್ಲೆಂಡ್ ಸಲಿಂಗ ವಿವಾಹಕ್ಕೆ ಅಧಿಕೃತವಾಗಿ ಸಮ್ಮತಿಸಿದ ಆಗ್ನೇಯ ಏಷ್ಯಾದ ಮೊದಲ ರಾಷ್ಟ್ರವಾಗಲಿದೆ.
ಇಂತಹ ಕಾನೂನುಗಳು ತೈವಾನ್, ನೇಪಾಳದಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಥಾಯ್ಲೆಂಡ್ ರಾಜನಿಂದಲೂ ಅನುಮತಿ ದೊರಕುವ ಸಾಧ್ಯತೆಯಿದೆ.
ಸಂಸತ್ತಿನ ಕೆಳಮನೆಯ ೪೨೫ ಸದಸ್ಯರಲ್ಲಿ ೪೦೦ ಜನ ಮಸೂದೆಗೆ ಒಪ್ಪಿಗೆ ಸೂಚಿಸಿದ್ದು, ೧೦ ಜನ ವಿರೋಧಿಸಿದ್ದಾರೆ. ಉಳಿದವರಲ್ಲಿ ಇಬ್ಬರು ಗೈರಾದರೆ, ಮೂವರು ಮತ ಚಲಾಯಿಸುವುದರಿಂದ ದೂರ ಉಳಿದಿದ್ದಾರೆ.