ಉಕ್ರೆನ್: 65 ಉಕ್ರೇನ್ ಯುದ್ಧ ಕೈದಿಗಳನ್ನು ಹೊತ್ತ ರಷ್ಯಾದ ಐಎಲ್ -76 ಮಿಲಿಟರಿ ಸಾರಿಗೆ ವಿಮಾನವು ಉಕ್ರೇನ್ ಗಡಿಯಲ್ಲಿರುವ ಪಶ್ಚಿಮ ಬೆಲ್ಗೊರೊಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ.
ಸೆರೆಹಿಡಿಯಲಾದ 65 ಉಕ್ರೇನ್ ಸೇನಾ ಸೈನಿಕರು, ಆರು ಸಿಬ್ಬಂದಿ ಮತ್ತು ಮೂವರು ಬೆಂಗಾವಲುಗಳನ್ನು ವಿನಿಮಯಕ್ಕಾಗಿ ಬೆಲ್ಗೊರೊಡ್ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು. ರಷ್ಯಾದ ಇಲ್ಯುಶಿನ್ ಐಎಲ್ -76 ಮಿಲಿಟರಿ ವಿಮಾನವು ಬುಧವಾರ ಉಕ್ರೇನ್ ಗಡಿಯ ಬಳಿ ಅಪಘಾತಕ್ಕೀಡಾಗಿದೆ. ಇದು ಉಕ್ರೇನ್ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಕರೆದೊಯ್ಯುತ್ತಿತ್ತು ಎಂದು ತಿಳಿದು ಬಂದಿದೆ.