News Karnataka Kannada
Saturday, May 11 2024
ವಿದೇಶ

ಮಹಿಳಾ ಪತ್ರಕರ್ತೆ ಎಲೆನಾ ಮಿಲಾಶಿನಾ ಮೇಲೆ ಹಲ್ಲೆ: ತಲೆ ಬೋಳಿಸಿ ಚಿತ್ರಹಿಂಸೆ

Russian journo
Photo Credit : Twitter

ಮಾಸ್ಕೋ: ಪ್ರಶಸ್ತಿ ವಿಜೇತೆ ರಷ್ಯಾದ ತನಿಖಾ ಪತ್ರಕರ್ತೆ ಎಲೆನಾ ಮಿಲಾಶಿನಾ ಅವರು ಚೆಚೆನ್ಯಾ ಪ್ರವಾಸದ ವೇಳೆ ಸಶಸ್ತ್ರಧಾರಿಗಳು ಹಲ್ಲೆ ನಡೆಸಿದ್ದು, ಥಳಿಸಿ, ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಎಲೆನಾ ಅವರ ಬೆರಳುಗಳು ಮುರಿದು ಹೋಗಿವೆ, ಪ್ರಜ್ಞೆಯನ್ನು ಕೂಡ ಕಳೆದುಕೊಂಡಿದ್ದರು, ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ ಮುಂಜಾನೆ ಮಿಲಾಶಿನಾ ಮತ್ತು ವಕೀಲ ಅಲೆಕ್ಸಾಂಡರ್ ನೆಮೊವ್ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನೊವಾಯಾ ಗೆಜೆಟಾ ಪತ್ರಿಕೆಯ ಪ್ರಸಿದ್ಧ ಪತ್ರಕರ್ತೆ ಮಿಲಾಶಿನಾ, ಜರೆಮಾ ಮುಸೇವಾ ಅವರ ಶಿಕ್ಷೆಯ ಕುರಿತು ವರದಿ ಮಾಡಲು ಚೆಚೆನ್ಯಾ ರಾಜಧಾನಿ ಗ್ರೋಜ್ನಿ ನ್ಯಾಯಾಲಯಕ್ಕೆ ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಕಾರಿನ ಚಾಲಕನ್ನು ಬೆದರಿಸಿ ಆತನನ್ನು ಕೆಳಗಿಳಿಸಿ ಬಂದೂಕುಧಾರಿಗಳು ಕಾರಿನೊಳಗೆ ಬಂದರು, ಬಳಿಕ ನನ್ನ ಕೈಕಾಲು ಕಟ್ಟಿ, ತಲೆಗೆ ಬಂದೂಕು ಇಟ್ಟು, ಹಲ್ಲೆ ನಡೆಸಿದ್ದಾರೆ, ತನ್ನ ಬಳಿ ಇದ್ದ ಕ್ಯಾಮರಾ, ಫೋನ್​ ಅನ್ನು ನಾಶಪಡಿಸಿದ್ದಾರೆ ಎಂದು ಎಲೆನಾ ಮಿಲಾಶಿನಾ ಹೇಳಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು