ನವದೆಹಲಿ: “ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ” ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರದ ತಂಡ ಮತ್ತು ಆರ್ಆರ್ ಆರ್ ತಂಡವನ್ನು ಪ್ರಧಾನಿ ಅಭಿನಂದಿಸಿದ್ದಾರೆ.
ಈ ಸಂಬಂಧ ಪ್ರಧಾನಿ ಟ್ವೀಟ್ ಮಾಡಿದ್ದು, ನಾಟು ಹಾಡು ಜಾಗತಿಕವಾಗಿ ಜನಪ್ರಿಯವಾಗಿದೆ. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡಾಗಿರುತ್ತದೆ. ಈ ಪ್ರತಿಷ್ಠಿತ ಗೌರವಕ್ಕಾಗಿ @mmkeeravaani, @boselyricist ತಂಡಕ್ಕೆ ಅಭಿನಂದನೆಗಳು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅವರ ಸಾಧನೆಗೆ ದೇಶಕ್ಕೆ ಹೆಮ್ಮೆ ಎಂದು ಟ್ವೀಟ್ನಲ್ಲಿ ವಿವರಿಸಿದ್ದಾರೆ.
ಅಲ್ಲದೆ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿರುವ ತಮ್ಮ ಸಾಕ್ಷ್ಯಚಿತ್ರ ತಂಡ “ದಿ ಎಲಿಫೆಂಟ್ ವಿಸ್ಪರರ್ಸ್” ಗೆ ನಿರ್ಮಾಪಕ ಗುನೀತ್ ಮೊಂಗಾ ಮತ್ತು ಅವರ ತಂಡಕ್ಕೆ ಪ್ರಧಾನಿ ಶುಭ ಹಾರೈಸಿದರು.