ಅಮೆರಿಕದಲ್ಲಿ ಇತ್ತೀಚೆಗಷ್ಟೇ ನಿರ್ಮಾಣವಾಗಿರುವ ಐತಿಹಾಸಿಕ ಅಕ್ಷರಧಾಮದ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಅಮೆರಿಕದ 30ಕ್ಕೂ ಅಧಿಕ ಯುವಕರು ಧೀಕ್ಷೆ ಪಡೆದು ನಿಸ್ವಾರ್ಥವಾಗಿ ಬದುಕು ನಡೆಸುವ ಸಂಕಲ್ಪತೊಟ್ಟಿದ್ದಾರೆ.
ಇವರಲ್ಲಿ ಕೆನಡಾ, ಅಮೆರಿಕ ಹಾಗೂ ಭಾರತದ ಯುವಕರು ಇದ್ದಾರೆ. ಏಕತೆ, ಭಕ್ತಿ, ಶೈಕ್ಷಣಿಕ, ವೃತ್ತಿಪರ ಹಿನ್ನೆಲೆಯಿಂದ ಬಂದ ಯುವಕರು ಇವರಾಗಿದ್ದಾರೆ. ನಿಸ್ವಾರ್ಥ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ನಮ್ರತೆ ಹಾಗೂ ಸಹಾನುಭೂತಿ ಸೇರಿದಂತೆ ಹಲವು ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಹಂತಸ್ವಾಮಿ ಮಹಾರಾಜ್ ಆಶೀರ್ವಧಿಸಿದ್ದಾರೆ.
ಅಮೆರಿಕದ ನ್ಯೂಜೆರ್ಸಿಯಲ್ಲಿ ತೆರೆಯಲಿರುವ ಅಕ್ಷರಧಾಮ ದೇಗುಲ ಭಾರತದಿಂದ ಹೊರಗಿರುವ ವಿಶ್ವದ ಎರಡನೇ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದಿಂದ ಹೊರಗಿರುವ ವಿಶ್ವದ ಎರಡನೇ ಅತಿದೊಡ್ಡ ಹಿಂದೂ ದೇವಾಲಯ ಎಂದು ಹೇಳಲಾಗುವ ಯುಎಸ್ಎ ಯ ನ್ಯೂಜೆರ್ಸಿಯ ರಾಬಿನ್ಸ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ತನ್ನ ಅದ್ಧೂರಿ ಉದ್ಘಾಟನೆಗೆ ಸಿದ್ಧವಾಗಿದೆ.ಈ ದೇವಾಲಯವು ಅಕ್ಟೋಬರ್ 8 ರಂದು ಉದ್ಘಾಟನೆಯಾಗಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಲಿದೆ.