News Karnataka Kannada
Monday, April 29 2024
ವಿದೇಶ

ದೇಶದ ಜನರ ಹಿತಾಸಕ್ತಿಗಾಗಿ ಮೋದಿ ಏನು ಮಾಡಲೂ ಸಿದ್ಧರಿದ್ದಾರೆ: ಪುಟಿನ್

Modi ready to do anything in the interest of the people of the country: Putin
Photo Credit : News Kannada

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿಯವರು ದೇಶಭಕ್ತಿ ಹಾಗೂ ದೇಶದ ಜನರ ಬಗ್ಗೆ ಅವರು ವಹಿಸಿರುವ ಕಾಳಜಿ ಬಗ್ಗೆ ಕೊಂಡಾಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರು ಹಾಗೂ ದೇಶದ ಹಿತಾಸಕ್ತಿ, ದೇಶದ ಸುರಕ್ಷತೆಯ ವಿಚಾರ ಬಂದಾಗ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳಲು ಸಿದ್ಧರಾಗಿರುತ್ತಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಹೌದು. . ಮಾಧ್ಯಮ ಸಂದರ್ಶನವೊಂದರಲ್ಲಿ, ಮಾತನಾಡಿದ ರಷ್ಯಾ ಅಧ್ಯಕ್ಷ, ಮೋದಿಯವರನ್ನು ಹೆದರಿಸಿ ಬೆದರಿಸಿ ಭಾರತ ಮತ್ತು ಭಾರತೀಯ ಜನರ ರಾಷ್ಟ್ರೀಯ ಹಿತಾಸಕ್ತಿ ವಿರುದ್ಧ ಯಾವುದೇ ಕ್ರಮ ಅಥವಾ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ನಾನು ಊಹಿಸಲು ಸಾಧ್ಯವಿಲ್ಲ.

ಅವರ ಮೇಲೆ ಅಂತಹ ಒತ್ತಡವಿದೆ ಎಂದು ನನಗೆ ತಿಳಿದಿದೆ ಎಂದು ಪುಟಿನ್ ಹೇಳಿದ್ದಾರೆ. ಮೋದಿಯವರು ಹೊರಗೆ ಏನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಪ್ರಮಾಣಿಕವಾಗಿ ಹೇಳಬೇಕಾದರೆ, ಕೆಲವೊಮ್ಮೆ ನನಗೆ ದೇಶದ ಹಿತಾಸಕ್ತಿ ಬಗ್ಗೆ ಅವರು ತೆಗೆದುಕೊಳ್ಳುವ ಈ ಕಠಿಣ ನಿರ್ಧಾರದ ಬಗ್ಗೆ ಅಚ್ಚರಿ ಎನಿಸುತ್ತದೆ ಎಂದರು.

ಇದೇ ವೇಳೆ ರಷ್ಯಾ ಹಾಗೂ ಚೀನಾ ನಡುವಿನ ಸಂಬಂಧಗಳ ಬಗ್ಗೆ ಮಾತನಾಡಿದ ಪುಟಿನ್ , ರಷ್ಯಾ ಹಾಗೂ ಚೀನಾ ನಡುವಿನ ಸಂಬಂಧವೂ ಎಲ್ಲಾ ದಿಕ್ಕುಗಳಿಂದಲೂ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿವೆ ಮತ್ತು ಇದರ ಮುಖ್ಯ ಭರವಸೆ ಪ್ರಧಾನಿ ಮೋದಿಯವರ ನೀತಿಯಾಗಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು