ಬೆಂಗಳೂರು: ಗೆಲ್ಲಬಹುದಾಗಿದ್ದ ಪಂದ್ಯಗಳನ್ನು ಕೊನೆ ಕ್ಷಣದ ಒತ್ತಡದಿಂದಾಗಿ ಕೈಚೆಲ್ಲಿ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ನಲ್ಲಿ ಜಯದ ಖಾತೆ ಇನ್ನೂ ಬೆಂಗಳೂರು ಬುಲ್ಸ್ ತೆರೆದಿಲ್ಲ. ಇನ್ನು ಇಂದು ಬೆಂಗಳೂರು ಬುಲ್ಸ್ ತಂಡ ಇನ್ನು ತವರಿನ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದೆ. ಇಂದು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಲ್ಸ್ಗೆ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ 8ನೇ ಆವೃತ್ತಿಯ ಚಾಂಪಿಯನ್ ದಬಾಂಗ್ ಡೆಲ್ಲಿ ಸವಾಲು ಎದುರಾಗಲಿದೆ.
ಸೌರಭ್ ನಂದಲ್ ನಾಯಕತ್ವದ ಬೆಂಗಳೂರು ಬುಲ್ಸ್ ಮೊದಲೆರಡು ಪಂದ್ಯಗಳಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಲನುಭವಿಸಿದೆ. ಆದರೆ ಇವೆರಡೂ ಬುಲ್ಸ್ಗೆ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದ ಪಂದ್ಯಗಳು.
ಆರಂಭದಲ್ಲಿ ಪಡೆದಿದ್ದ ಮುನ್ನಡೆಯನ್ನು ಉಳಿಸಿಕೊಳ್ಳಲಾಗದೆ ಕೊನೆ ಕ್ಷಣದಲ್ಲಿ ತಂಡಕ್ಕೆ ಸೋಲು ಎದುರಾಗಿದ್ದವು. ಇಂದು ಪಂದ್ಯ ಸಂಜೆ 7:30ಕ್ಕೆ ಪ್ರಾರಂಭವಾಗಲಿದೆ. ಹೀಗಾಗಿ ಇಂದಿನ ಪಂದ್ಯ ರೋಚಕತೆಯಿಂದ ನಡೆಯುವ ಸಾದ್ಯತೆಯಿದೆ. ಇನ್ನು ನಟ ಸುದೀಪ್ ಇಂದು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಬೆಂಗಳೂರು ಬುಲ್ಸ್-ದಬಾಂಗ್ ಡೆಲ್ಲಿ ಪಂದ್ಯ ವೀಕ್ಷಿಸಲಿದ್ದಾರೆ.
ನಾಳೆ ಮ್ಯಾಚ್ ನೋಡೋದಕ್ಕೆ ಕಿಚ್ಚ ಬರ್ತಿದ್ದಾರೆ. #AskKichchaonStar ಬಳಸಿ ನಿಮ್ಮ ಪ್ರಶ್ನೆಗಳನ್ನ ಸುದೀಪ್ ಅವರಿಗೆ ಕೇಳಿ ಉತ್ತರ ಪಡೆಯಬಹುದು 😌
ನೋಡಿರಿ 📺 | PKL | Bengaluru Bulls v Dabang Delhi ನಾಳೆ ರಾತ್ರಿ 7:30ಕ್ಕೆ | ನಿಮ್ಮ #StarSportsKannada ಮತ್ತು Disney+Hotstar ನಲ್ಲಿ
@KicchaSudeep #BLRvDEL pic.twitter.com/VKtosxLjXK— Star Sports Kannada (@StarSportsKan) December 7, 2023