ವಾಷಿಂಗ್ಟನ್‌: ‘ಶರಣಾಗದಿದ್ದರೆ ಇರಾನ್‌ ಮೇಲಿನ ಸೇನಾ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ಇದರ ಪರಿಣಾಮ ಘೋರವಾಗಿರುತ್ತದೆ. ಇರಾನ್‌ನ ಹೊಸ ನೆಲೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಯಲಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಶನಿವಾರ ಗುಡುಗಿದ್ದಾರೆ.

‘ಇರಾನ್‌ ಇನ್ನು ಮುಂದೆ ಪಶ್ಚಿಮ ಏಷ್ಯಾದ ಹಿಂಸಕನಾಗಿ ಮುಂದುವರಿಯಲು ಅಮೆರಿಕ ಅವಕಾಶ ನೀಡುವುದಿಲ್ಲ. ಬೇಷರತ್ತಾಗಿ ಶರಣಾಗದಿದ್ದರೆ ಇರಾನ್‌ನ ಸರ್ವನಾಶ ಖಚಿತ’ ಎಂದು ಹೇಳಿದ್ದಾರೆ.