ಬೆಂಗಳೂರು: ಇರಾನ್–ಇಸ್ರೇಲ್ ಸಂಘರ್ಷ ಹಿನ್ನಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ವ್ಯತ್ಯಯವಾಗಿದ್ದು, 24 ವಿಮಾನಗಳ ಹಾರಾಟ ರದ್ದಾಗಿದೆ.

ಬೆಂಗಳೂರಿನಿಂದ ಬೇರೆ‌ ಕಡೆಗೆ ಹೊರಡಬೇಕಿದ್ದ ವಿಮಾನಗಳು ರದ್ದಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ಮುನ್ನಾ ಏರ್​ಲೈನ್ಸ್​​ನೊಂದಿಗೆ ಮಾಹಿತಿ ತಿಳಿದು ಬರುವಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆ. ಇನ್ನು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ಸಹಾಯವಾಣಿ ಜೊತೆಗೆ ಸಹಾಯ ಕೇಂದ್ರ ಸ್ಥಾಪನೆ ಕೂಡ ಸ್ಥಾಪನೆ ಮಾಡಲಾಗಿದೆ.

ಇರಾನ್ ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ಹಿನ್ನೆಲೆ ಬೆಂಗಳೂರಿನ ದೇವನಹಳ್ಳಿ ಏರ್​ಪೋರ್ಟ್​ನಿಂದ ಮಧ್ಯಪ್ರಚ್ಯಾ ದೇಶಗಳಿಗೆ ಹೋಗಬೇಕಾಗಿದ್ದ ವಿಮಾನಗಳು ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಿಂದ ಹೊಡಬೇಕಿದ್ದ 12 ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಗಲ್ಪ್‌ ರಾಷ್ಟ್ರಗಳಿಗೆ ತೆರಳುವ ಎಲ್ಲಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.