ದುಬೈ: ಅಮೆರಿಕ ಹಾಗೂ ಇಸ್ರೇಲ್‌ ತನ್ನ ಮೇಲೆ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್‌ ಕೂಡ ಭಾನುವಾರ ದಾಳಿ ನಡೆಸಿದೆ. ಇಸ್ರೇಲ್‌ ಕೇಂದ್ರ ಭಾಗದ ನಗರ ಬೆಟ್‌ ಶೆಮೆಷ್‌ ಮೇಲೆ ಇರಾನ್‌ ನಡೆಸಿದ ಕ್ಷಿಪಣಿಗಳ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

‘ಇರಾನ್‌ ಉಡಾಯಿಸಿದ ಕ್ಷಿಪಣಿಯೊಂದು ನಗರದ ಕಟ್ಟಡಕ್ಕೆ ಅಪ್ಪಳಿಸಿತು. ಈ ದಾಳಿಯಲ್ಲಿ, 9 ಜನರು ಸಾವಿಗೀಡಾದರು ಹಾಗೂ 23 ಮಂದಿ ಗಾಯಗೊಂಡಿದ್ದಾರೆ’ ಎಂದು ತುರ್ತು ಸೇವೆ ಒದಗಿಸುವ ಸಂಸ್ಥೆ ಎಂಡಿಎ ಹೇಳಿದೆ.

ಇರಾಕ್‌ ಗಡಿಗೆ ಹೊಂದಿಕೊಂಡ, ಇರಾನ್‌ನ ಮೆಹ್ರಾನ್‌ ನಗರದಲ್ಲಿರುವ ಗಡಿ ಭದ್ರತಾ ಪಡೆಯ ಕೇಂದ್ರ ಕಚೇರಿ ಮೇಲೆ ಅಮೆರಿಕ ಹಾಗೂ ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ 43 ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿದೆ.