ಇಸ್ರೇಲ್ ನಡೆಸಿದ ಜಂಟಿ ಸೇನಾದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಸಾವಿಗೀಡಾಗಿದ್ದು, ಯುದ್ಧದ ಭೀಕರತೆಗೆ ಹೊಸ ತಿರುವು ಕೊಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತೇ ಬೆಚ್ಚಿಬೀಳುವಂತಹ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇರಾನ್ ಮೇಲೆ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಒಂದೇ ಏಟಿಗೆ ಇರಾನ್‌ನ 48 ಉನ್ನತ ನಾಯಕರನ್ನು ಮಟ್ಟಹಾಕಲಾಗಿದೆ ಎಂದು ಅವರು ಘೋಷಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್ ಕಾರ್ಯಾಚರಣೆ ವೇಳಾಪಟ್ಟಿಗಿಂತ ಮುಂಚಿತವಾಗಿ ಪೂರ್ಣ ಮಾಡಿದ್ದೇವೆ. ಟ್ರಂಪ್, ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯು ನಾವು ನಿಗದಿಪಡಿಸಿದ್ದ ಸಮಯಕ್ಕಿಂತಲೂ ಅತ್ಯಂತ ವೇಗವಾಗಿ ಮತ್ತು ಯಶಸ್ವಿಯಾಗಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ. ನಾವು ನಡೆಸಿದ ದಾಳಿಯಲ್ಲಿ ಇರಾನ್ ಆಡಳಿತದ 48 ಪ್ರಮುಖ ನಾಯಕರು ಈಗ ಇಲ್ಲ. ಈ ಕಾರ್ಯಾಚರಣೆಯು ನಿಗದಿತ ವೇಳಾಪಟ್ಟಿಗಿಂತಲೂ ಮುಂಚಿತವಾಗಿಯೇ ಗುರಿ ತಲುಪಿದೆ” ಎಂದು ಅವರು ಗುಡುಗಿದ್ದಾರೆ.
ಟ್ರಂಪ್ ಹೇಳಿಕೆಯು ಇಡೀ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಒಂದು ವೇಳೆ ಇರಾನ್‌ನ ಇಷ್ಟು ದೊಡ್ಡ ಸಂಖ್ಯೆಯ ಉನ್ನತ ನಾಯಕರು ಹತರಾಗಿದ್ದರೆ ಅದು ಮಧ್ಯಪ್ರಾಚ್ಯದ ರಾಜಕೀಯ ಮತ್ತು ಭದ್ರತಾ ವ್ಯವಸ್ಥೆಯನ್ನೇ ಬುಡಮೇಲು ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಇರಾನ್ ಈವರೆಗೂ ಈ ಸಾವು-ನೋವುಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.

