ಇಂಗ್ಲೆಂಡ್: ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿಯ ಶವ ಲಂಡನ್ ಸರೋವರದಲ್ಲಿ ಪತ್ತೆಯಾಗಿದೆ. ಗುರಶ್ಮಾನ್ ಸಿಂಗ್ ಭಾಟಿಯಾ (23) ಮೃತ ವಿದ್ಯಾರ್ಥಿ.
ಡಿಸೆಂಬರ್ 14ರಂದು ಸ್ನೇಹಿತರೊಂದಿಗೆ ಗುರಶ್ಮಾನ್ ಸಿಂಗ್ ಭಾಟಿಯಾ ಹೋಗಿದ್ದರು. ಪಾರ್ಟಿ ಬಳಿಕ ಭಾರತೀಯ ವಿದ್ಯಾರ್ಥಿ ಗುರಶ್ಮಾನ್ ಸಿಂಗ್ ಭಾಟಿಯಾ ಕಾಣೆಯಾಗಿದ್ದ. ಈ ವಿಚಾರವನ್ನು ಆತನ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಭಾರತೀಯ ವಿದ್ಯಾರ್ಥಿಯ ಶವ ಲಂಡನ್ನ ಕ್ಯಾನರಿ ವಾರ್ಫ್ ಪ್ರದೇಶದ ಸರೋವರದಲ್ಲಿ ಪತ್ತೆಯಾಗಿದೆ.
ಇನ್ನು, ಮೆಟ್ರೋಪಾಲಿಟನ್ ಪೋಲಿಸ್ ಅಧಿಕಾರಿಗಳ ಪ್ರಕಾರ, ಲೌಬರೋ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ 23 ವರ್ಷದ ಗುರಶ್ಮಾನ್ ಸಿಂಗ್ ಭಾಟಿಯಾ, ಜಲಂಧರ್ ಮೂಲದ ವಿದ್ಯಾರ್ಥಿ ಡಿಸೆಂಬರ್ 15ರಿಂದ ನಾಪತ್ತೆಯಾಗಿದ್ದ. ಇದೀಗ ಪರಿಶೀಲನೆ ನಡೆದಿದ ಬಳಿಕ ಪೂರ್ವ ಲಂಡನ್ನ ಕ್ಯಾನರಿ ವಾರ್ಫ್ನಲ್ಲಿರುವ ಸರೋವರದ ಬಳಿ ಶವವಾಗಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಈ ಸಾವಿನ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.