ಇಸ್ಲಾಮಾಬಾದ್: ಫೇಸ್ ಬುಕ್ ಫ್ರೆಂಡ್ ಗಾಗಿ ಗಂಡ ಹಾಗೂ ಮಕ್ಕಳನ್ನು ತೊರೆದು ಪಾಕಿಸ್ತಾನಕ್ಕೆ ಹೋಗಿ ಪ್ರಿಯತಮ ನಸ್ರುಲ್ಲಾನನ್ನು ಮದುವೆಯಾದ ರಾಜಸ್ತಾನದ ಅಂಜು ಎಂಬ ಮಹಿಳೆ ಇದೀಗ ಭಾರತಕ್ಕೆ ವಾಪಸ್ ಆಗುವುದಾಗಿ ಹೇಳುತ್ತಿದ್ದಾಳೆ. ನಾನು ಇಲ್ಲಿ ಖುಷಿಯಿಂದ ಇಲ್ಲ. ಹಾಗಾಗಿ ಭಾರತಕ್ಕೆ ವಾಪಸ್ ಬರುತ್ತೇನೆ ಎಂದು ಆಕೆ ಹೇಳಿರುವ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕ್ನಲ್ಲಿ ಎಲ್ಲವೂ ಚೆನ್ನಾಗಿದೆ. ಹಲವು ಕನಸುಗಳೊಂದಿಗೆ ಇಲ್ಲಿಗೆ ಬಂದಿದ್ದೆ. ಆದರೆ ಇಲ್ಲಿ ನಾನು ಖುಷಿಯಿಂದ ಇಲ್ಲ. ನಾನು ಮಾಡಿದ ತಪ್ಪಿಗೆ ಭಾರತದಲ್ಲಿ ನನ್ನ ಕುಟುಂಬಸ್ಥರು ಅವಮಾನಕ್ಕೆ ಈಡಾಗುತ್ತಿದ್ದಾರೆ. ನನ್ನ ಮಕ್ಕಳನ್ನು ನೆನೆದರೆ ನನಗೆ ಸಂಕಟವಾಗುತ್ತದೆ ಎಂದಿದ್ದಾರೆ. ಅಲ್ಲದೆ ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ. ಎಂದು ಅಂಜು ಹೇಳಿರುವ ವಿಡಿಯೋ ವೈರಲ್ ಆಗಿದೆ.