ಟೆಲ್ ಅವಿವ್: ಗಾಜಾದ ಅಲ್-ಕುದ್ಸ್ ಆಸ್ಪತ್ರೆ ಆವರಣದ ಬಳಿ 21 ಹಮಾಸ್ ಉಗ್ರರನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸೋಮವಾರ ತಿಳಿಸಿದೆ. ಹಮಾಸ್, ರಾಕೆಟ್ ಚಾಲಿತ ಗ್ರೆನೇಡ್ ನೊಂದಿಗೆ ಅಲ್-ಕುದ್ಸ್ ಆಸ್ಪತ್ರೆಯ ಆವರಣದ ಬಳಿ ನಾಗರಿಕರ ನಡುವೆ ಐಡಿಎಫ್ ಮೇಲೆ ಗುಂಡು ಹಾರಿಸಿತು. ತಕ್ಷಣವೇ ಶಸ್ತ್ರಸಜ್ಜಿತ, ಇಂಜಿನಿಯರಿಂಗ್ ಮತ್ತು ಕಾಲಾಳುಪಡೆ ವಿಭಾಗಗಳನ್ನು ಹೊಂದಿರುವ 188 ಬ್ರಿಗೇಡ್ ಹಮಾಸ್ ದಾಳಿಗೆ ಪ್ರತಿಕ್ರಿಯೆ ನೀಡಿದೆ. ಅಲ್ಲದೆ 21 ಹಮಾಸ್ ಉಗ್ರರನ್ನು ಕೊಂದು ಹಾಕಿತು ಎಂದು ಐಡಿಎಫ್ ಹೇಳಿದೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ.
21 ಹಮಾಸ್ ಉಗ್ರರನ್ನು ಕೊಂದು ಹಾಕಿದ ಐಡಿಎಫ್
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.