News Karnataka Kannada
Monday, April 29 2024
ವಿದೇಶ

ಹಮಾಸ್‌ ರಾಜಕೀಯ ಮುಖ್ಯಸ್ಥನ ಪುತ್ರಿ ಇಸ್ರೇಲ್‌ ದಾಳಿಗೆ ಬಲಿ

Granddaughter of Hamas political bureau chief Haniyeh reportedly killed in Gaza
Photo Credit : News Kannada

ಟೆಲ್ ಅವೀವ್: ಹಮಾಸ್‌ನ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರ ಮೊಮ್ಮಗಳು ರೋವಾ ಹಮ್ಮಮ್ ಇಸ್ಮಾಯಿಲ್ ಹನಿಯೆಹ್ ಐಡಿಎಫ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಮಾಧ್ಯಮ ವರದಿಗಳು ತಿಳಿಸಿವೆ. ಈಕೆ ಗಾಜಾ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು ಎಂದು ತಿಳಿದುಬಂದಿದೆ.

ಆದರೆ ಈ ಬಗ್ಗೆ ಇಸ್ರೇಲ್‌ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಸ್ರೇಲ್ ಸೇನೆಯು ಈಗಾಗಲೇ ಗಾಜಾ ನಗರವನ್ನು ತಲುಪಿದ್ದು, ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಅವರ ಸಹೋದರ ಮೊಹಮ್ಮದ್ ಸಿನ್ವಾರ್ ಅವರ ಕಚೇರಿ ಆವರಣದಲ್ಲಿ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಅಲ್ಲದೆ ಹಮಾಸ್ ಅನ್ನು ಬೆಂಬಲಿಸುವ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಮತ್ತು ಕರಪತ್ರಗಳನ್ನು ವಶಪಡಿಸಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು