News Karnataka Kannada
Monday, April 29 2024
ವಿದೇಶ

ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ, ಘಟನೆ ನಡೆದು 110 ದಿನದೊಳಗೆ ಅಪರಾಧಿಗೆ ಮರಣದಂಡನೆ

Girl rape, murder case, death sentence to the culprit within 110 days of the incident
Photo Credit : News Kannada

ಆಲುವಾ: ಕೇರಳದ ಅತಿ ವಿಕೃತ ಘಟನೆಯೆಂದು ಪರಿಗಣಿತವಾದ ಪ್ರಕರಣವೊಂದರಲ್ಲಿ ಘಟನೆ ನಡೆದು 110 ದಿನಗಳೊಳಗೆ ಪ್ರಕರಣದ ತೀರ್ಪು ಬಂದಿದೆ. ಜುಲೈ ತಿಂಗಳಲ್ಲಿ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಬಿಹಾರದ ವ್ಯಕ್ತಿಯೊಬ್ಬನಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ವಿಶೇಷ ನ್ಯಾಯಾಲಯವು ಮಂಗಳವಾರ ಮರಣದಂಡನೆ ವಿಧಿಸಿದೆ.

ಜುಲೈ 28 ರಂದು ಆಲುವಾದಲ್ಲಿ ನಡೆದ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಕಳೆದ ವಾರ ಕೊಚ್ಚಿಯ ಪೋಕ್ಸೊ ನ್ಯಾಯಾಲಯವು ಆರೋಪಿ ಅಶ್ವಕ್ ಆಲಂ (28) ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಕೊಲೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 302, 376A ಮತ್ತು 297 ಮತ್ತು ಪೊಸ್ಕೊ ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆತನನ್ನು ದೋಷಿ ಎಂದು ಘೋಷಿಸಿತ್ತು. ಘಟನೆ ನಡೆದು ಕೇವಲ 110 ದಿನಗಳ ನಂತರ ಪ್ರಕರಣದ ತೀರ್ಪು ಬಂದಿದೆ.30 ದಿನಗಳಲ್ಲಿ ತನಿಖೆ ಪೂರ್ಣಗೊಂಡಿದ್ದುಮುಂದಿನ 60 ದಿನಗಳಲ್ಲಿ ವಿಚಾರಣೆಯನ್ನು ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು