News Karnataka Kannada
Tuesday, April 30 2024
ವಿದೇಶ

ಗಾಜಾ: ಅಲ್-ಶಿಫಾ ಆಸ್ಪತ್ರೆ ವಾರ್ಡ್ ನಾಶ, ಎರಡು ಶಿಶು, ಓರ್ವ ವ್ಯಕ್ತಿ ಸಾವು

Gaza: Al-Shifa hospital ward destroyed, two babies, one person dead
Photo Credit : News Kannada

ಗಾಜಾ: ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾವನ್ನು ಇಸ್ರೇಲ್ ಸೇನೆ ಸುತ್ತುವರೆದಿದ್ದು, ಆಸ್ಪತ್ರೆ ಸಮೀಪದಲ್ಲಿ ವೈಮಾನಿಕ ದಾಳಿ ಸೇರಿದಂತೆ ಬಾಂಬ್ ಸ್ಫೋಟಗಳು ನಡೆಯು ತ್ತಿರುವುದರಿಂದ ಆಸ್ಪತ್ರೆಯ ಕಾರ್ಡಿಯಾಕ್ ವಾರ್ಡ್ ನಾಶವಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ಹೇಳಿದ್ದಾರೆ.

ಆಸ್ಪತ್ರೆಯೊಳಗೆ ಶಸ್ತ್ರ ಚಿಕಿತ್ಸೆಯಾದ 600 ರೋಗಿಗಳು, 37 ರಿಂದ 40 ಶಿಶುಗಳು ಮತ್ತು 17 ಜನರು ತೀವ್ರ ನಿಗಾ ಘಟಕದಲ್ಲಿದ್ದು, ಅವರಿಗೆ ನೀರು, ವಿದ್ಯುತ್, ಆಹಾರ ದೊರೆಯದಂತಾಗಿದೆ. ‘ಕದನ ವಿರಾಮದೊಂದಿಗೆ ತಕ್ಷಣವೇ ಈ ರಕ್ತಪಾತವನ್ನು ನಿಲ್ಲಿಸದಿದ್ದರೆ ಅಥವಾ ರೋಗಿಗಳ ವೈದ್ಯಕೀಯ ಸ್ಥಳಾಂತರಿಸುವಿಕೆಯನ್ನು ನಿಲ್ಲಿಸದಿದ್ದರೆ, ಈ ಆಸ್ಪತ್ರೆಗಳು ಶವಾಗಾರವಾಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಕ್ಯುಬೇಟರ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ಅಲ್-ಶಿಫಾ ಆಸ್ಪತ್ರೆಯ ನವಜಾತ ಘಟಕದಲ್ಲಿದ್ದ ಎರಡು ಶಿಶುಗಳು ಸಾವನ್ನಪ್ಪಿವೆ ಮತ್ತು ವೆಂಟಿಲೇಟರ್ ಸ್ಥಗಿತಗೊಂಡಾಗ ಒಬ್ಬ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ ಎಂದು ಶಸ್ತ್ರಚಿಕಿತ್ಸಕರೊಬ್ಬರು ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು