News Karnataka Kannada
Tuesday, May 07 2024
ವಿದೇಶ

ಬಹುಕಾಲದ ಗೆಳತಿಯನ್ನು ಮದುವೆಯಾದ ವಿದೇಶಾಂಗ ಸಚಿವೆ !

Post
Photo Credit : News Kannada

ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರು ತಮ್ಮ ಸಂಗಾತಿ ಸೋಫಿ ಅಲ್ಲೌಚೆ ಅವರನ್ನು ವಿವಾಹವಾಗಿದ್ದಾರೆ ಎಂದು ವಾಂಗ್ ಇಂದು ತಿಳಿಸಿದ್ದಾರೆ.

‘ನಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಈ ವಿಶೇಷ ದಿನವನ್ನು ಹಂಚಿಕೊಳ್ಳಲು ನಮಗೆ ಸಂತೋಷವಾಗಿದೆ’ ಎಂದು ವಾಂಗ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮದುವೆಯ ಉಡುಪಿನಲ್ಲಿ ಮತ್ತು ಹೂಗುಚ್ಛವನ್ನು ಹಿಡಿದಿರುವ ಫೋಟೋ ವೈರಲ್ ಆಗಿದೆ.

ವಾಂಗ್ ಮತ್ತು ಅಲ್ಲೌಚೆ ಸುಮಾರು ಎರಡು ದಶಕಗಳಿಂದ ಒಟ್ಟಿಗೆ ಇದ್ದರು ಮತ್ತು ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿ ಅಡಿಲೇಡ್ ನ ವೈನರಿಯಲ್ಲಿ ಶನಿವಾರ ವಿವಾಹವಾದರು ಎಂದು ವರದಿ ತಿಳಿಸಿದೆ. 2002 ರಿಂದ ಲೇಬರ್ ಸೆನೆಟರ್ ಆಗಿರುವ ವಾಂಗ್, ಆಸ್ಟ್ರೇಲಿಯಾದ ಕ್ಯಾಬಿನೆಟ್ ಸ್ಥಾನವನ್ನು ಅಲಂಕರಿಸಿದ ಮೊದಲ ಏಷ್ಯನ್ ಮೂಲದ ವ್ಯಕ್ತಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು