News Karnataka Kannada
Monday, April 29 2024
ವಿದೇಶ

ವಿಶ್ವದಲ್ಲೇ ಮೊದಲ ಬಾರಿಗೆ ‘ನೈಟ್ರೋಜನ್ ಅನಿಲ’ ಬಳಸಿ ಮರಣದಂಡನೆ !

ಅಮೆರಿಕದ ಸುಪ್ರೀಂಕೋರ್ಟ್ ಗುರುವಾರ ಮೊದಲ ಬಾರಿಗೆ ನೈಟ್ರೋಜನ್ ಅನಿಲದಿಂದ ಕೈದಿಯೊಬ್ಬನಿಗೆ ಮರಣದಂಡನೆ ವಿಧಿಸಿದೆ. 1982ರಿಂದ ಈ ರೀತಿ ಕೈದಿಗಳಿಗೆ ಮರಣದಂಡನೆ ವಿಧಿಸುವುದನ್ನ ವಿರೋಧಿಸಿದ್ದ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ. ಮೊದಲ ಬಾರಿಗೆ, ಕೆನ್ನೆತ್ ಸ್ಮಿತ್ (58) ನೈಟ್ರೋಜನ್ ಅನಿಲದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.
Photo Credit : News Kannada

ಅಲಬಾಮಾ: ಅಮೆರಿಕದ ಸುಪ್ರೀಂಕೋರ್ಟ್ ಗುರುವಾರ ಮೊದಲ ಬಾರಿಗೆ ನೈಟ್ರೋಜನ್ ಅನಿಲದಿಂದ ಕೈದಿಯೊಬ್ಬನಿಗೆ ಮರಣದಂಡನೆ ವಿಧಿಸಿದೆ. 1982ರಿಂದ ಈ ರೀತಿ ಕೈದಿಗಳಿಗೆ ಮರಣದಂಡನೆ ವಿಧಿಸುವುದನ್ನ ವಿರೋಧಿಸಿದ್ದ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ.

ಮೊದಲ ಬಾರಿಗೆ, ಕೆನ್ನೆತ್ ಸ್ಮಿತ್ (58) ನೈಟ್ರೋಜನ್ ಅನಿಲದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಕೆನ್ನೆತ್ ಸ್ಮಿತ್ (58) 1988ರಲ್ಲಿ ಪಾದ್ರಿಯ ಪತ್ನಿ ಎಲಿಜಬೆತ್ ಸೆನೆಟ್ ಕೊಲೆಗೆ ಮರಣದಂಡನೆ ವಿಧಿಸಲಾಯಿತು.

ಸ್ಮಿತ್’ನನ್ನ ದಕ್ಷಿಣ ಅಲಬಾಮಾ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಆತನ ಮುಖದ ಮೇಲೆ ಉಸಿರಾಟಕಾರಕ ಮುಖವಾಡವನ್ನ ಹಾಕಲಾಯಿತು ಮತ್ತು ಆತನ ಉಸಿರಾಡಿದ ಗಾಳಿಯಲ್ಲಿ ನೈಟ್ರೋಜನ್ ಸಾರಜನಕ ಅನಿಲವನ್ನು ರವಾನಿಸಲಾಯಿತು. ಗಾಳಿಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಏಳು ನಿಮಿಷಗಳಲ್ಲಿ ಆತ ಸಾವನ್ನಪ್ಪಿದ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಆತನ ಸಾವನ್ನ ಅಲಬಾಮಾ ಗವರ್ನರ್ ಖಚಿತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು