News Karnataka Kannada
Monday, April 29 2024
ವಿದೇಶ

ದುಬೈ: ಇಸ್ರೇಲ್ ಮೂಲದ ‘ಗ್ಯಾಲಕ್ಸಿ ಲೀಡರ್’ ಹಡಗು ಅಪಹರಣ

Dubai: Israeli-origin ship hijacked
Photo Credit : News Kannada

ದುಬೈ: ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಮೂಲದ “ಗ್ಯಾಲಕ್ಸಿ ಲೀಡರ್” ಹಡಗಿನ ಯೆಮೆನ್ ಮೂಲದ ಹೌತಿ ಬಂಡುಕೋರರು ಅಪಹರಣ ಮಾಡಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

ಇದೀಗ ಇಸ್ರೇಲಿ ಬಿಲಿಯನೇರ್ ಒಡೆತನದ ಕಂಟೈನರ್ ಹಡಗಿನ ಮೇಲೆ ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಮಹಾಸಾಗರದಲ್ಲಿ ಶಂಕಿತ ಇರಾನ್‌ನ ಡ್ರೋನ್‌ನಿಂದ ಈ ದಾಳಿ ನಡೆದಿದೆ ಎಂದು ಅಮೆರಿಕಾದ ರಕ್ಷಣಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗುಪ್ತಚರ ವಿಷಯಗಳ ಬಗ್ಗೆ ಚರ್ಚಿಸಲು ಅನಾಮಧೇಯತೆಯ ಷರತ್ತಿನ ಮೇಲೆ ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿದ ರಕ್ಷಣಾ ಅಧಿಕಾರಿಯೊಬ್ಬರು, ಹಿಂದೂ ಮಹಾಸಾಗರದಲ್ಲಿ ಕಂಟೈನರ್ ಹಡಗಿನ ಮೇಲೆ ದಾಳಿ ನಡೆದಿದೆ. ಶಾಹೆದ್-136 UAV ಡ್ರೋನ್‌ಗಳಿಂದ ದಾಳಿ ಮಾಡಲಾಗಿದ್ದು ಡ್ರೋನ್‌ ದಾಳಿಯಿಂದಾಗಿ ಹಡಗಿಗೆ ಹಾನಿಯಾಗಿದೆ. ಆದರೆ, ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದರು.

ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ದಾಳಿಯ ಹಿಂದೆ ಇರಾನ್ ಇದೆ ಎಂದು ಅಮೆರಿಕಾ ಮಿಲಿಟರಿ ಏಕೆ ನಂಬುತ್ತದೆ ಎಂಬುದನ್ನು ವಿವರಿಸಲು ಅವರು ನಿರಾಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು