ವಾಷಿಂಗ್ಟನ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮಾನಹಾನಿ ಪ್ರಕರಣದ ವಿಚಾರಣೆಗೆ ನ್ಯೂಯಾರ್ಕ್ನ ಮ್ಯಾನ್ಹಾಟ್ಟನ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಕಳೆದ ವರ್ಷ ಟ್ರಂಪ್ ವಿರುದ್ಧ ಅತ್ಯಾಚಾರದ ಆರೋಪಿಸಿ ಲೇಖಕಿ ಇ. ಜೀನ್ ಕ್ಯಾರೊಲ್ ಮಾನಹಾನಿ ಪ್ರಕರಣ ಹೂಡಿದ್ದರು. 2019ರಲ್ಲಿ ಟ್ರಂಪ್ ಅಧ್ಯಕ್ಷರಾಗಿದ್ದಾಗ ತಮ್ಮ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪ ಮಾಡಿದ್ದರು. ಕನಿಷ್ಠ $12 ಮಿಲಿಯನ್ ಪರಿಹಾರ ನೀಡಬೇಕು ಎಂದು ಕ್ಯಾರೊಲ್ ಹೇಳಿದ್ದರು.
ನ್ಯಾಯಮೂರ್ತಿ ಲೆವಿಸ್ ಕಲ್ಪನ್ ಅವರು ಪ್ರಕರಣದ ವಿಚಾರಣೆಯ ನೇತೃತ್ವ ವಹಿಸಿದ್ದು, ಟ್ರಂಪ್ ಅವರು ಕ್ಯಾರೊಲ್ ಅವರ ಮಾನಹಾನಿ ಮಾಡಿದ್ದು ಸಾಬೀತಾಗಿದೆ. ಅಲ್ಲದೆ ಮಾನಹಾನಿಯಾಗಿ ಎಷ್ಟು ಮೊತ್ತ ನೀಡಬೇಕು ಎನ್ನುವ ನಿರ್ಧಾರವನ್ನು ನ್ಯಾಯಾಧೀಶರ ಸಮಿತಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ.