News Karnataka Kannada
Sunday, May 05 2024
ವಿದೇಶ

ದೀಪಾವಳಿ ಸಂಭ್ರಮ: ನ್ಯೂಯಾರ್ಕ್‌ ಶಾಲೆಗಳಿಗೆ ಸಾಮೂಹಿಕ ರಜೆ

Diwali celebrations: New York schools to remain closed en masse
Photo Credit : News Kannada

ನ್ಯೂಯಾರ್ಕ್: ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಕತ್ತಲು ದೂರ ಮಾಡಿ ಬೆಳಕು ತರುವ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲಿಯೂ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕದ ನ್ಯೂಯಾರ್ಕ್ ಸಿಟಿ ಮೇಯರ್ ಮಹತ್ವದ ಘೋಷಣೆ ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೆ ನ್ಯೂಯಾರ್ಕ್ ಸಿಟಿಯಲ್ಲಿ ಸಾರ್ವತ್ರಿಕ ಶಾಲಾ ರಜೆ ಘೋಷಿಸಲಾಗಿದೆ.

ಮೇಯರ್ ಎರಿಡ್ ಆ್ಯಡಮ್ ಅಧಿಕೃತವಾಗಿ ದೀಪಾವಳಿ ಹಬ್ಬದ ಸಾರ್ವತ್ರಿಕ ರಜೆ ಘೋಷಣೆ ಮಾಡಿದ್ದಾರೆ. ನ್ಯೂಯಾರ್ಕ್ ಸಿಟಿ ಸಾಂಸ್ಕತಿಕ ವೈವಿದ್ಯತೆಯಿಂದ ಕೂಡಿದೆ. ಇಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಶೇಷ ಹಾಗೂ ಐತಿಹಾಸಿಕ ಮಹತ್ವದ ದೀಪಾವಳಿ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ ಎಂದು ಎರಿಕ್ ಆ್ಯಡಮ್ ಹೇಳಿದ್ದಾರೆ.

ಈ ಘೋಷಣೆ ಕುರಿತು ಅತೀವ ಸಂತಸ ವ್ಯಕ್ತಪಡಿಸಿದೆ ನ್ಯೂಯಾರ್ಕ್ ಸಿಟಿ ಮೇಯರ್ ಕಚೇರಿಯ ಡೆಪ್ಯೂಟಿ ಕಮಿಷನರ್, ಭಾರತೀಯ ಮೂಲಕ ದಿಲೀಪ್ ಚೌವ್ಹಾಣ್ ಇದು ಐತಿಹಾಸಿಕ ದಿನ ಎಂದು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು