News Karnataka Kannada
Sunday, April 28 2024
ವಿದೇಶ

ಟೆಕ್ಸಾಸ್‌: ಡೈರಿ ಫಾರ್ಮ್‌ನಲ್ಲಿ ಭೀಕರ ಬೆಂಕಿ ಅವಘಡ, 18 ಸಾವಿರ ದನಗಳು ಸಾವು

Mangaluru: Cattle left for grazing stolen
Photo Credit : Pixabay

ಟೆಕ್ಸಾಸ್‌ : ಅಮೆರಿಕದ ಟೆಕ್ಸಾಸ್‌ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಫಾರ್ಮ್‌ ಒಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 18 ಸಾವಿರಕ್ಕೂ ಅಧಿಕ ದನಗಳು ಮೃತಪಟ್ಟಿವೆ.

ಸೌತ್‌ಫೋರ್ಕ್‌ ಡೈರಿ ಫಾರ್ಮ್ಸ್‌ನಲ್ಲಿ ಸ್ಫೋಟದ ಬಳಿಕ ಬೆಂಕಿಹತ್ತಿಕೊಂಡು ಸಾವಿರಾರು ದನಗಳು ಜೀವಂತ ಸುಟ್ಟು ಕರಕಲಾಗಿವೆ. ಇದು ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಫಾರ್ಮ್‌ ಆಗಿದ್ದು, ಸ್ಫೋಟದ ಕಾರಣ ತಿಳಿದುಬಂದಿಲ್ಲ. ಟೆಕ್ಸಾಸ್‌ ನಗರ ಶೆರಿಫ್‌ ಕಚೇರಿ ಆಕಾಶದೆತ್ತರ ಚಾಚಿದ ಅಗ್ನಿಜ್ವಾಲೆಯ ಚಿತ್ರವನ್ನು ಹಂಚಿಕೊಂಡು 18 ಸಾವಿರಕ್ಕೂ ಅಧಿಕ ದನಗಳು ಸತ್ತಿವೆ ಮತ್ತು ಇನ್ನೂ ಸಾವಿರಾರು ದನಗಳು ಒಳಗೆ ಸಿಕ್ಕಿ ಹಾಕಿಕೊಂಡಿವೆ ಎಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು