ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಸೆರೆಹಿಡಿದಂತಹ ಫೋಟೋ ಒಂದನ್ನು ವೃತ್ತಿಪರ ಕುಸ್ತಿಪಟು ಮತ್ತು ಡಬ್ಲ್ಯುಡಬ್ಲ್ಯುಇ ಸ್ಟಾರ್ ಜಾನ್ ಸೀನಾ ಅವರು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಜಾನ್ ಸೇನಾ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಪ್ರಧಾನಿ ಮೋದಿ ತಮ್ಮ ಅಂಗೈ ಅನ್ನು ತೋರಿಸುತ್ತಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಜಾನ್ ಸೀನಾ ಅವರ ಡಬ್ಲ್ಯುಡಬ್ಲ್ಯುಇ ಸಿಗ್ನೇಚರ್ ಆಗಿರುವ ‘ಯು ಕಾಂಟ್ ಸೀ ಮಿ’ (ನೀನು ನನ್ನನ್ನು ನೋಡಲು ಸಾಧ್ಯವಿಲ್ಲ) ಸ್ಟೈಲ್ ನೆನಪಿಸಿಕೊಳ್ಳುತ್ತಿದ್ದಾರೆ.
ಡಬ್ಲ್ಯುಡಬ್ಲ್ಯುಇ ಇಂಡಿಯಾ ಕೂಡ ಜಾನ್ ಸೀನಾ ಶೇರ್ ಮಾಡಿಕೊಂಡಿರುವ ಫೋಟೋಗೆ ಬಾವುಟಗಳು ಮತ್ತು ಹ್ಯಾಂಡ್ಶೇಕ್ ಎಮೋಜಿಯೊಂದಿಗೆ ಪ್ರತಿಕ್ರಿಯೆ ನೀಡಿದೆ. ಇಬ್ಬರ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಜಾಲತಾಣದಲ್ಲಿ ಈ ಫೋಟೋ ಭಾರೀ ಸದ್ದು ಮಾಡುತ್ತಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
https://www.instagram.com/p/Ct3ajmktyM8/