News Karnataka Kannada
Saturday, May 18 2024
ದೇಶ

ಇನ್‌ಸ್ಟಾ ರೀಲ್ಸ್‌ ನೋಡುತ್ತಿದ್ದ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆ

Woman cuts off man's genitals while watching Insta Reels
Photo Credit : News Kannada

ಅಮರಾವತಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿಯ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸುತ್ತಿದ್ದ ವೇಳೆ ಆತನ ಎರಡನೇ ಪತ್ನಿ ಮರ್ಮಾಂಗವನ್ನೇ ಬ್ಲೇಡ್‌ ನಿಂದ ಕತ್ತರಿಸಿದ ಘಟನೆ ನಡೆದಿದೆ.

ಎನ್‌ಟಿಆರ್ ಜಿಲ್ಲೆಯ ನಂದಿಗಾಮದಲ್ಲಿ ಶುಕ್ರವಾರ ಈ ಘಟನೆ ನಡೆದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆನಂದ್ ಬಾಬು ಅವರನ್ನು ನಂದಿಗಾಮ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯವಾಡದ ಆಸ್ಪತ್ರೆಗೆ ರವಾನಿಸಲಾಗಿದೆ.

ಕೆಲ ವೈಮನಸ್ಸಿನಿಂದ ಮೊದಲ ಪತ್ನಿಯಿಂದ ಆನಂದ್‌ ಬಾಬು ಬೇರ್ಪಟ್ಟಿದ್ದು, ಐದು ವರ್ಷಗಳ ಹಿಂದೆ ವರಮ್ಮ ಎಂಬ ಮಹಿಳೆಯನ್ನು ಮದುವೆಯಾಗಿದ್ದ. ಶುಕ್ರವಾರ ರಾತ್ರಿ ಆನಂದ್ ಬಾಬು ತಮ್ಮ ಮೊದಲ ಪತ್ನಿಯ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸುತ್ತಿದ್ದರು.

ಇದರಿಂದ ಕೋಪಗೊಂಡ ವರಮ್ಮ ರೀಲ್ಸ್‌ ನೋಡಬೇಡಿ ಎಂದು ಎಳೆದಾಡಿದ್ದಾರೆ. ಈ ವೇಳೆ ತೀವ್ರ ವಾಗ್ವಾದ ನಡೆದಿದ್ದು, ಕೋಪಗೊಂಡ ವರಮ್ಮ ಬಾಬು ಅವರ ಮರ್ಮಾಂಗವನ್ನೇ ಬ್ಲೇಡ್‌ ನಿಂದ ಕತ್ತರಿಸಿ ಹಾಕಿದ್ದಾರೆ.

ಪೊಲೀಸ್‌ ವಿಚಾರಣೆ ವೇಳೆ ನಾನು ಉದ್ದೇಶಪೂರ್ವಕವಾಗಿ ದಾಳಿ ಮಾಡಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಆನಂದಬಾಬು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು