News Karnataka Kannada
Sunday, April 14 2024
Cricket
ಬೆಂಗಳೂರು ನಗರ

ಹಿಂದಿನ ಸೀಟ್‌ನಲ್ಲಿ ಮಹಿಳೆ ಕೂತಿದ್ದಾಗಲೇ ಹಸ್ತ ಮೈಥುನ ಮಾಡಿಕೊಂಡ ರ್‍ಯಾಪಿಡೋ ಬೈಕ್​ ಚಾಲಕ!

Rapido bike driver masturbates while woman is sitting in the back seat
Photo Credit : Facebook

ಬೆಂಗಳೂರು: ರಾಪಿಡೋದಲ್ಲಿ ರೈಡ್ ಬುಕ್ ಮಾಡಿದ್ದ ಮಹಿಳಾ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಪತ್ತೆಗೆ ಬೆಂಗಳೂರು ಪೊಲೀಸರು ಶೋಧ ನಡೆಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಸಂತ್ರಸ್ತ ಮಹಿಳೆ ಜುಲೈ 21ರಂದು ಗಲಭೆ ಪೀಡಿತ ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಟೌನ್​ಹಾಲ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಬಳಿಕ ಮಹಿಳೆ ಎಲೆಕ್ಟ್ರಾನಿಕ್ ಸಿಟಿಗೆ ಆಟೋ ಬುಕ್​ ಮಾಡಿದ್ದು ಅವರು ಆರ್ಡರ್​ ಕ್ಯಾನ್ಸಲ್​ ಮಾಡಿದ್ದಾರೆ.

ಬಳಿಕ ರ್‍ಯಾಪಿಡೋನಲ್ಲಿ ಬೈಕ್​ ಟ್ಯಾಕ್ಸಿ ಬುಕ್​ ಮಾಡಿದ್ದು, ಆರೋಪಿಯೂ ಮಹಿಳಾ ಪ್ರಯಾಣಿಕರನ್ನು ಮಾರ್ಗಮಧ್ಯೆ ನಿರ್ಜನ ಪ್ರದೇಶದಕ್ಕೆ ಕರೆದೊಯ್ದು ಅವರ ಮುಂಭಾಗ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ತಮ್ಮ ಮನೆ 200 ಮೀಟರ್​ ದೂರ ಇರಬೇಕಾದರೆ ಗಾಡಿಯನ್ನು ನಿಲ್ಲಿಸುವಂತೆ ಸೂಚಿಸಿದ್ದರು ಸಹ ಆತ ಅವರ ಮಾತನ್ನು ಕೇಳದೆ ಅವರ ನಿವಾಸದ ಮುಂಭಾಗ ತೆರಳಿದ್ದಾನೆ.

ಬಳಿಕ ಆರೋಪಿಯೂ ಅವರ ವೈಯಕ್ತಿಕ ದೂರವಾಣಿ ನಂಬರ್​ಗೆ ಕರೆ ಮಾಡಲು ಶುರು ಮಾಡಿದ್ದು, ವಾಟ್ಸ್​ಅಪ್​ನಲ್ಲಿ ಮೆಸ್ಸೇಜ್​ ಮಾಡಿದ್ದಾನೆ. ಈ ಸಂಬಂಧ ಮಹಿಳೆ ಎಚ್ಚರಿಕೆ ನೀಡಿದ್ದರು ಸಹ ಆತ ಮೆಸ್ಸೇಜ್​ ಮತ್ತು ಕರೆ ಮಾಡುವುದನ್ನು ನಿಲ್ಲಿಸದೆ ಇರುವುದನ್ನು ನೋಡಿ ಬ್ಲಾಕ್​ ಮಾಡಿದ್ದಾರೆ.

ಈ ಸಂಬಂಧ ಮಹಿಳೆ ಟ್ವೀಟ್​ ಮಾಡಿ ರ್‍ಯಾಪಿಡೋ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು ಎಸ್​ಜೆಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು