News Karnataka Kannada
Saturday, April 27 2024
ಪಶ್ಚಿಮ ಬಂಗಾಳ

“ಸಂದೇಶ್​ಖಾಲಿ” ಮಹಿಳೆಯರ ದೌರ್ಜನ್ಯ ಕುರಿತು ನೈಜ ಘಟನೆ ಆಧರಿತ ಚಿತ್ರ

ಇತ್ತೀಚೆಗೆ ಮೂಡಿ ಬಂದಿರುವ ಸನಿಮಾಗಳು ನೈಜ ಘಟನೆ ಆಧರಿತ ಸಿನಿಮಾಗಳು ಹಾಗೂ ಸಮಾಜಕ್ಕೆ ಜಾಗೃತಿ ಮೂಡಿಸುವ ಚಿತ್ರಗಳು. ಇದೀಗ ಅಂತಹ ಮತ್ತೊಂದು ಸಿನಿಮಾ ನಿಮ್ಮಮುಂದೆ ಬರಲು ಸಿದ್ಧವಾಗುತ್ತಿದೆ. ಪಶ್ಚಿಮ ಬಂಗಾಳದ ಸಂದೇಶ್​ಖಾಲಿಯಲ್ಲಿ ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯ ಪ್ರಕರಣ ಎಲ್ಲಡೆ ಸದ್ದು ಮಾಡಿತ್ತು
Photo Credit : News Kannada

ಪಶ್ಚಿಮ ಬಂಗಾಳದ  :  ಇತ್ತೀಚೆಗೆ ಮೂಡಿ ಬಂದಿರುವ ಸನಿಮಾಗಳು ನೈಜ ಘಟನೆ ಆಧರಿತ ಸಿನಿಮಾಗಳು ಹಾಗೂ ಸಮಾಜಕ್ಕೆ ಜಾಗೃತಿ ಮೂಡಿಸುವ ಚಿತ್ರಗಳು. ಇದೀಗ ಅಂತಹ ಮತ್ತೊಂದು ಸಿನಿಮಾ ನಿಮ್ಮಮುಂದೆ ಬರಲು ಸಿದ್ಧವಾಗುತ್ತಿದೆ. ಪಶ್ಚಿಮ ಬಂಗಾಳದ ಸಂದೇಶ್​ಖಾಲಿಯಲ್ಲಿ ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯ ಪ್ರಕರಣ ಎಲ್ಲಡೆ ಸದ್ದು ಮಾಡಿತ್ತು. ಇದೀಗ ಸಿನಿಮಾ ಮೂಲಕ ಸಂದೇಶ್​ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್​ನ ಮುಖಂಡ ಶಹಜಹಾನ್​ ಶೇಖ್​ ನಡೆಸಿದ ಅಕ್ರಮಗಳನ್ನು ಬಯಲಿಗೆ ಎಳೆಯುವ ಪ್ರಯತ್ನಕ್ಕೆ ಸಿನಿಮಾ ತಂಡ ಸಿದ್ದತೆ ನಡೆಸುತ್ತಿದೆ.

ಸಂದೇಶ್​ಖಾಲಿಯಲ್ಲಿ ಮಹಿಳೆಯರ ವಿರುದ್ಧ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅಲ್ಲದೇ ಭೂಮಿಯನ್ನು ವಶ ಪಡಿಸಿಕೊಂಡಿದ್ದ ಕಾಂಗ್ರೆಸ್​ನ ಮುಖಂಡ ಶಹಜಹಾನ್​ ಶೇಖ್​  ವಿರುದ್ಧ ಎಲ್ಲ ಮಹಿಳೆಯರು ಸಿಡಿದೆದ್ದಿದ್ದಾರೆ. ಹಾಗಾಗಿ ಸಿನಿಮಾ ಮೂಲಕ ಆತನ ಸಂಪೂರ್ಣ ಅಕ್ರಮ ದೌರ್ಜನ್ಯಗಳನ್ನು ಹೊರ ತರುವ ಪ್ರಯತ್ನಮಾಡಲಿದೆ ಚಿತ್ರ ತಂಡ. ಈ ಚಿತ್ರದ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಲಾಗಿದ್ದು ಸಿನಿಮಾದ ಶೀರ್ಷಿಕೆ ʻಸಂದೇಶ್​ಖಾಲಿʼ ಇಡಲಾಗಿದೆ.ಇದನ್ನು ವಿಷೇಶವಾಗಿ ಮಹಿಳಾ ದಿನದಂದು ಘೋಷಿಸಲಾಗಿದೆ.

ಇನ್ನೇನು ಆಗಸ್ಟ ನಲ್ಲಿ ಶೂಟಿಂಗ್‌ ಆಗಲಿದ್ದು ಚುನಾವಣೆ ಮೊದಲೇ ಸಿನಿಮಾ ಬಿಡುಗಡೆ ಮಾಡುವ ಭರವಸೆಯಲ್ಲಿದ್ದಾರೆ.‘ಭಯ, ದೌರ್ಜನ್ಯ ಹಾಗೂ ತುಳಿತದ ವಿರುದ್ಧ ನಡೆದ ಯುದ್ಧದ ನೈಜ ಕಥೆ’ ಎಂಬ ಟ್ಯಾಗ್​ಲೈನ್​ ಈ ಸಿನಿಮಾದ ಪೋಸ್ಟರ್​ನಲ್ಲಿದೆ.

‘ಪರಿನ್​ ಮಲ್ಟಿಮೀಡಿಯಾ’ ಬ್ಯಾನರ್​ ಮೂಲಕ ‘ಸಂದೇಶ್​ಖಾಲಿ’ ಮೂಡಿಬರಲಿದ್ದು, ಸುಮೀತ್​ ಚೌಧರಿ ಮತ್ತು ಕೇವಲ್​ ಸೇಟ್​ ಅವರು ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಸೌರಭ್​ ತಿವಾರಿ ಅವರು ‌ಸಿನಿಮಾದ ನಿರ್ದೇಶನದ ಮಾಡಲಿದ್ದಾರೆ ಅಮಿತಾಭ್​ ಸಿಂಗ್​ ಹಾಗೂ ಇಶಾನ್​ ಬಾಜ್​ಪಾಯಿ ಅವರು ಚಿತ್ರಕಥೆ ಬರೆಯಲಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು