News Karnataka Kannada
Sunday, April 28 2024
ಪಶ್ಚಿಮ ಬಂಗಾಳ

ಟಿಎಂಸಿಗೆ ವಾಪಾಸ್ಸಾದ ಬಿಜೆಪಿ ಶಾಸಕ

Bjp
Photo Credit :
ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯಿಂದ ಟಿಎಂಸಿಗೆ ಮರುಳುತ್ತಿರುವ ನಾಯಕರ ಸಂಖ್ಯೆ ಹೆಚ್ಚುತ್ತಿದ್ದು, ಶನಿವಾರ ಬಿಜೆಪಿ ಶಾಸಕ ಸೌಮೆನ್ ರಾಯ್ ಅವರು ಮತ್ತೆ ತೃಣಮೂಲ ಕಾಂಗ್ರೆಸ್ ಸೇರಿದರು.

ಈ ಹಿಂದೆ ಟಿಎಂಸಿಯಲ್ಲಿದ್ದ ರಾಯ್ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಅವರು ಉತ್ತರ ದಿನಜ್‌ಪುರ ಜಿಲ್ಲೆಯ ಕಲಿಯಗಂಜ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಇಂದು ಕೋಲ್ಕತ್ತಾದ ತೃಣಮೂಲ ಭವನದಲ್ಲಿ ರಾಜ್ಯ ಸಚಿವ ಮತ್ತು ಪಕ್ಷದ ನಾಯಕ ಪಾರ್ಥ ಚಟರ್ಜಿ ಸಮ್ಮುಖದಲ್ಲಿ ಮತ್ತೆ ಟಿಎಂಸಿಗೆ ಮರಳಿದರು.

“ಟಿಎಂಸಿಗೆ ಸೇರಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೊಂದಿಗೆ ಮಾತನಾಡಿದ ರಾಯ್, “ಕೆಲವು ಸನ್ನಿವೇಶಗಳಿಂದಾಗಿ ನಾನು ಬಿಜೆಪಿ ಟಿಕೆಟ್ ನಲ್ಲಿ ಕಲಿಯಗಂಜ್ ನಿಂದ ಸ್ಪರ್ಧಿಸಬೇಕಾಯಿತು. ಆದರೆ ನನ್ನ ಆತ್ಮ ಮತ್ತು ಹೃದಯ ಟಿಎಂಸಿಗೆ ಸೇರಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪ್ರಯತ್ನಗಳನ್ನು ಬೆಂಬಲಿಸಲು ನಾನು ಮತ್ತೆ ಪಕ್ಷಕ್ಕೆ ಸೇರಿಕೊಂಡೆ. ನಾನು ಇಲ್ಲದ ಸಮಯದಲ್ಲಿ ಪಕ್ಷಕ್ಕೆ ಕ್ಷಮೆಯಾಚಿಸುತ್ತೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು