ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಫೆ.26 ರ ಇಂದು ವಿಜಯ್ ಶೇಖರ್ ಶರ್ಮಾ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಪಿಪಿಬಿಎಲ್ ಮಂಡಳಿಯನ್ನು ಪುನರ್ ರಚಿಸಲಾಗಿದೆ ಎಂದು ಒನ್ 97 ಕಮ್ಯುನಿಕೇಷನ್ಸ್ ಷೇರು ಮಾರುಕಟ್ಟೆ ಮಂಡಳಿಗೆ ಮಾಹಿತಿ ನೀಡಿದೆ.
ವಿಜಯ್ ಶೇಖರ್ ಶರ್ಮಾ ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಹೊಸ ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಪಿಪಿಬಿಎಲ್ ನಮಗೆ ತಿಳಿಸಿದೆ ಎಂದು ಒಸಿಎಲ್ ತಿಳಿಸಿದೆ.