ಡೆಹ್ರಾಡೂನ್: ನಗರದ ಸಹಸ್ತ್ರಧಾರಾ ರಸ್ತೆಯ ಬಳಿ ಜೂ. 17ರಂದು ಮಹಿಳೆ ಮನೆಗೆ ಮರಳುತ್ತಿದ್ದಾಗ ಮಹಿಳೆಯ ಪತಿಯ ಇಬ್ಬರು ಸ್ನೇಹಿತರು ಆಕೆಗೆ ಲಿಫ್ಟ್ ಕೊಡುವುದಾಗಿ ಹೇಳಿ ಚಲಿಸುತ್ತಿದ್ದ ಕಾರಿನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಡೆಹ್ರಾಡೂನ್ನಲ್ಲಿ ನಡೆದಿದೆ.
ಮಹಿಳೆ ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಆಕೆ ಕಾರನ್ನು ಹತ್ತಿದಾಗ ವಾಹನದೊಳಗೆ ಮತ್ತೊಬ್ಬ ವ್ಯಕ್ತಿ ಇರುವುದನ್ನು ಕಂಡಿದ್ದಾಳೆ. ಆರೋಪಿಗಳು ಮಹಿಳೆಗೆ ನಿದ್ರಾಜನಕ ಬೆರೆಸಿದ ತಂಪು ಪಾನೀಯವನ್ನು ನೀಡಿದ್ದಾರೆ. ಪಾನೀಯ ಕುಡಿದ ಮಹಿಳೆಗೆ ಪ್ರಜ್ಞೆ ತಪ್ಪಿದೆ. ಈ ವೇಳೆ ಆರೋಪಿಗಳು ಚಲಿಸುವ ಕಾರಿನಲ್ಲೇ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
ಮಹಿಳೆಗೆ ಪ್ರಜ್ಞೆ ಬಂದಾಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇದರಿಂದ ಚೇತರಿಸಿಕೊಂಡ ಮಹಿಳೆ ಈ ಮೂವರ ವಿರುದ್ಧ ದೂರು ನೀಡಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ