News Karnataka Kannada
Sunday, April 28 2024
ಉತ್ತರಖಂಡ

ರಾಜ್ಯದ ಎಲ್ಲ ಶಾಲೆಗಳಲ್ಲಿ ವೇದ, ರಾಮಾಯಣ, ಗೀತೆ ಕಲಿಸಬೇಕು; ಧನ ಸಿಂಗ್‌ ರಾವತ್‌

School
Photo Credit :

ಡೆಹ್ರಾಡೂನ್‌ : ರಾಜ್ಯದ ಎಲ್ಲ ಶಾಲೆಗಳಲ್ಲಿ ವೇದಗಳು, ರಾಮಾಯಣ ಹಾಗೂ ಗೀತೆಯನ್ನು (ಭಗವದ್ಗೀತೆ) ಕಲಿಸಬೇಕು ಎಂದು ಉತ್ತರಾಖಂಡ ಶಿಕ್ಷಣ ಸಚಿವ ಧನ ಸಿಂಗ್‌ ರಾವತ್‌ ಹೇಳಿದ್ದಾರೆ.

ಉತ್ತರಾಖಂಡದ ಇತಿಹಾಸ ಮತ್ತು ಭೂಗೋಳದ ಕುರಿತು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದಿದ್ದಾರೆ. ನೂತನ ಶಿಕ್ಷಣ ನೀತಿಯ ಪ್ರಕಾರ, ವಿದ್ಯಾರ್ಥಿಗಳಿಗೆ ಪಠ್ಯಕ್ರಮವು ಭಾರತದ ಇತಿಹಾಸ ಮತ್ತು ಪರಂಪರೆಯನ್ನು ಆಧರಿಸಿರಬೇಕು. ವೇದ ಪುರಾಣ ಹಾಗೂ ಗೀತೆಯ ಜೊತೆಗೆ ಸ್ಥಳೀಯ ಭಾಷೆಗಳಿಗೂ ಪ್ರೋತ್ಸಾಹಿಸಬೇಕು.

ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿರುವ ಮೊದಲ ರಾಜ್ಯ ಉತ್ತರಾಖಂಡ. ‘ಶೀಘ್ರದಲ್ಲೇ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುತ್ತದೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ನೂತನ ಶಿಕ್ಷಣ ನೀತಿ ಅಡಿಯಲ್ಲಿನ ವ್ಯವಸ್ಥೆಗೆ ಅನುಮೋದನೆ ಪಡೆಯಲಾಗುತ್ತದೆ’ ಎಂದು ಶಿಕ್ಷಣ ಸಚಿವ ಧನ ಸಿಂಗ್‌ ರಾವತ್‌ ಹೇಳಿದ್ದಾರೆ.

ಉತ್ತರಾಖಂಡ ಹೋರಾಟ ಮತ್ತು ಅಲ್ಲಿನ ಪ್ರಮುಖ ವ್ಯಕ್ತಿಗಳ ಕುರಿತು ಹೊಸ ಪಠ್ಯದಲ್ಲಿ ಅಳವಡಿಸುತ್ತಿರುವುದು ತಿಳಿದು ಬಂದಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು