News Karnataka Kannada
Tuesday, April 30 2024
ಉತ್ತರಖಂಡ

ಉತ್ತರಕಾಶಿ: ಕೈಯಿಂದಲೇ ಸುರಂಗ ಕೊರೆಯುವ ಕೆಲಸ ಆರಂಭ

Uttarkashi: Hand-to-hand tunnel drilling begins
Photo Credit : News Kannada

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಹರಸಾಹಸ ಮುಂದುವರಿದಿದೆ. ಬೆಟ್ಟದ ಮೇಲಿನಿಂದ ಡ್ರಿಲ್ಲಿಂಗ್‌ ನಡೆಸುವುದರ ಜೊತೆಗೆ, ಕೈಯಿಂದ ಅಗೆಯುವ ಕೆಲಸವೂ ಆರಂಭವಾಗಿದೆ.

ಕಾರ್ಮಿಕರಿಗೆ ಹೊರಬರುವ ಮಾರ್ಗವನ್ನು ನಿರ್ಮಿಸಬೇಕೆಂದರೆ ಬೆಟ್ಟದ ಮೇಲಿನಿಂದ ಲಂಬವಾಗಿ ಒಟ್ಟು 86 ಮೀಟರ್‌(1.2 ಮೀಟರ್‌ ವ್ಯಾಸದ ಪೈಪ್‌ ) ಕೊರೆಯಬೇಕಾಗುತ್ತದೆ. ಭಾನುವಾರವೇ ಈ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರ ಸಂಜೆ ವೇಳೆಗೆ 31 ಮೀ.ಗಳಷ್ಟು ಕೊರೆಯಲಾಗಿದೆ.

ಇದೇ ವೇಳೆ, ಪ್ಲಾಸ್ಮಾ ಕಟ್ಟರ್‌ ಮೂಲಕ ಒಳಗೆ ಸಿಲುಕಿದ್ದ ಆಗರ್‌ ಯಂತ್ರದ ಭಾಗಗಳನ್ನು ಹೊರತೆಗೆಯಲಾಗಿದೆ. ಈ ಸ್ಥಳದಲ್ಲಿ ಅಡ್ಡಲಾಗಿ ಕೊರೆಯುವ ಕೆಲಸವನ್ನು ಮಾಡಲು ರ‍್ಯಾಟ್‌-ಹೋಲ್‌ ಮೈನರ್‌ (ಒಬ್ಬ ವ್ಯಕ್ತಿಗಷ್ಟೇ ಹೋಗಿ-ಬರಲು ಸಾಧ್ಯವಾಗುವಂಥ ಕಿರಿದಾದ ಗುಂಡಿಗಳನ್ನು ಅಗೆಯುವವರು)ಗಳ ತಂಡವನ್ನು ಕರೆಸಿಕೊಳ್ಳಲಾಗಿದೆ.

ಮತ್ತೂಂದೆಡೆ ಸುರಂಗದ ಮತ್ತೂಂದು ತುದಿಯಿಂದ ಡ್ರಿಲ್ಲಿಂಗ್‌ ಆರಂಭಿಸುವ ಚಿಂತನೆಯನ್ನೂ ಮಾಡಲಾಗಿದೆ.
6 ಮಂದಿ ರ್ಯಾಟ್‌ ಹೋಲ್‌ ಮೈನರ್‌ಗಳ ತಂಡವು ಸೋಮವಾರ ಸ್ಥಳಕ್ಕೆ ಆಗಮಿಸಿದೆ. ಈ ತಂಡದ ಪ್ರತಿ ಸದಸ್ಯನು ಒಂದು ಬಾರಿಗೆ ಒಬ್ಬನಂತೆ ಸುರಂಗದ ಅವಶೇಷಗಳ ಒಳಗೆ ತೂರಿಸಲಾಗಿರುವ 800 ಎಂಎಂ ವ್ಯಾಸದ ಪೈಪ್‌ನೊಳಕ್ಕೆ ಹೋಗಿ, ಸಲಿಕೆಯ ಮೂಲಕ ಕೈಯಿಂದಲೇ ಅಗೆಯಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು