News Karnataka Kannada
Sunday, April 28 2024
ಉತ್ತರ ಪ್ರದೇಶ

ಯಮರಾಜ ನಿಮಗಾಗಿ ಕಾಯುತ್ತಿದ್ದಾನೆ: ಕ್ರಿಮಿನಲ್‌ಗಳಿಗೆ ಯೋಗಿ ಖಡಕ್ ವಾರ್ನಿಂಗ್

Yamraj is waiting for you: Yogi warns criminals
Photo Credit : IANS

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಪರಾಧಿಗಳನ್ನು ಮಟ್ಟಹಾಕುವ ರೀತಿ ಬದಲಾಗಿದೆ. ಗಂಭೀರ ಕ್ರಿಮಿನಲ್‌ ಅಪರಾಧ ಪ್ರಕರಣಗಳ ಆರೋಪಿಗಳನ್ನು ಎನ್‌ಕೌಂಟರ್‌ ಮಾಡುವುದು, ಸಾರ್ವಜನಿಕ ಆಸ್ತಿಪಾಸ್ತಿ ಸೇರಿ ಯಾವುದೇ ಕೃತ್ಯದಲ್ಲಿ ತೊಡಗಿದವರ ಮನೆಗಳಿಗೆ ಬುಲ್ಡೋಜರ್‌ ನುಗ್ಗಿಸುವದು ಸೇರಿ ಹಲವು ರೀತಿಯ ಕ್ರಮ ತೆಗೆದುಕೊಂಡಿದ್ದಾರೆ.

ಈಗ ಕ್ರಿಮಿನಲ್‌ಗಳಿಗೆ, ಪುಂಡರಿಗೆ ಯೋಗಿ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವಂತಹ ಅಪರಾಧವನ್ನು ಯಾರಾದರೂ ಮಾಡಿದವರಿಗಾಗಿ ಯಮರಾಜ ಕಾಯುತ್ತಿದ್ದಾನೆ ಎಂದು ಹೇಳಿದ್ದಾರೆ. ಅಂಬೇಡ್ಕರ್ ನಗರದಲ್ಲಿ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಬಾಲಕಿಯ ದುಪಟ್ಟಾವನ್ನು ಎಳೆದಿದ್ದರು, ಆಗ ಬಾಲಕಿ ಕೆಳಗೆ ಬಿದ್ದಾಗ ಮತ್ತೋರ್ವನ ಬೈಕ್​ ಆಕೆಯ ಮೈಮೇಲೆ ಹರಿದು ಆಕೆ ಉಸಿರು ಚೆಲ್ಲಿದ್ದಳು. ಈ ಪ್ರಕರಣದ ಆರೋಪಿಯನ್ನು ಬಂಧಿಸಿದ ಬಳಿಕ ಸಿಎಂ ಯೋಗಿ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

‘ರಾಜ್ಯದಲ್ಲಿ ಯಾರಾದರೂ ಈ ರೀತಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಅವರಿಗೆ ಕಿರುಕುಳ ನೀಡುವುದು ಮಾಡಿದರೆ, ಅಂತಹವರಿಗೆ ಯಮರಾಜ ಕಾಯುತ್ತಿರುತ್ತಾನೆ. ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಸರ್ಕಾರ ರಾಜಿ ಆಗುವುದಿಲ್ಲ. ಕಠಿಣ ಕ್ರಮಗಳಿಂದಲೇ ಅಪರಾಧಿಗಳಿಗೆ ತಕ್ಕ ಪಾಠ ಕಲಿಸಲಾಗುತ್ತದೆ’ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇನ್ನು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 354 ಜೊತೆಗೆ POCSO ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ಸೆಹಬಾಜ್ ಮತ್ತು ಆತನ ಸಹೋದರ ಅರ್ಬಾಜ್ ಎಂದು ಗುರುತಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು