News Karnataka Kannada
Wednesday, May 08 2024
ಉತ್ತರ ಪ್ರದೇಶ

ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಗೆ ಹತ್ಯಾ ಬೆದರಿಕೆ, ವ್ಯಕ್ತಿಯ ಬಂಧನ

Uttar Pradesh: Uttar Pradesh CM Yogi Adityanath receives death threat, man arrested
Photo Credit : Wikimedia

ಉತ್ತರಪ್ರದೇಶ:  ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರಿಗೆ ಕೊಲೆ ಮಾಡುವುದಾಗಿ ವಾಟ್ಸ್‌ಆಪ್ ಸಂದೇಶವೊಂದು ಉತ್ತರಪ್ರದೇಶ ಪೊಲೀಸ್ ಸಹಾಯವಾಣಿ ದೂರವಾಣಿಗೆ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ವಾಟ್ಸ್‌ಆಪ್ ಸಂಖ್ಯೆ 112 ಸಹಾಯವಾಣಿಗೆ ಕೊಲೆ ಬೆದರಿಕೆ ಸಂದೇಶ ಬಂದಿದೆ. ಮುಖ್ಯಮಂತ್ರಿಯನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಶಂಕಿತ ಶಾಹಿದ್ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಖನೌನ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಶಾಹಿದ್ ವಿರುದ್ಧ ಪೊಲೀಸ್ ಪ್ರಧಾನಿ ಕಚೇರಿಯ ಕಮಾಂಡರ್ ಸುಭಾಸ್ ಕುಮಾರ್ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಬಂಧನಕ್ಕಾಗಿ ಹಲವು ವಿಶೇಷ ಕಾರ್ಯಪಡೆಗಳನ್ನು ರಚಿಸಲಾಗಿತ್ತು. ಅಲ್ಲದೆ, ಸೈಬರ್ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು