News Karnataka Kannada
Saturday, May 11 2024
ಉತ್ತರ ಪ್ರದೇಶ

ಕಚೇರಿಯಲ್ಲಿ ಲಾಡೆನ್‌ ಫೋಟೋ ಅಳವಡಿಸಿದ್ದ ಅಧಿಕಾರಿ ಅಮಾನತು

UP engineer sacked for eulogising Osama Bin Laden
Photo Credit : IANS

ಲಖನೌ:  ಕಚೇರಿಯಲ್ಲಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ ಫೋಟೋ ಹಾಕಿದ್ದ ಉತ್ತರ ಪ್ರದೇಶ ವಿದ್ಯುತ್ ನಿಗಮ ನಿಯಮಿತದ (ಯುಪಿಸಿಎಲ್) ಉಪವಿಭಾಗಾಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ವಿಚಾರಣೆ ನಂತರ ಅಧಿಕಾರಿ ರವೀಂದ್ರ ಪ್ರಕಾಶ್ ಗೌತಮ್ ನನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಯುಪಿಸಿಎಲ್ ಅಧ್ಯಕ್ಷ ಎಂ. ದೇವರಾಜ್ ಆದೇಶಿಸಿದ್ದಾರೆ.

ಹತ್ಯೆಗೀಡಾಗಿರುವ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ತನ್ನ ಆರಾಧ್ಯ ದೈವನಂತೆ ಆತನ ಪ್ರತಿಮೆ ಮತ್ತು ಫೋಟೋವನ್ನು ಗೌತಮ್ ಕಚೇರಿಯಲ್ಲಿ ಹಾಕಿದ್ದು ತನಿಖೆ ವೇಳೆಯಲ್ಲಿ ಕಂಡುಬಂದಿದೆ ಎಂದು ದಕ್ಷಿಣಾಂಚಲ್ ವಿದ್ಯುತ್ ವಿತರಣಾ ನಿಗಮದ ಎಂಡಿ ಅಮಿತ್ ಕಿಶೋರ್ ಪಿಟಿಐಗೆ ತಿಳಿಸಿದ್ದಾರೆ. ಸೋಮವಾರ ಎಸ್‌ಡಿಒ ಗೌತಮ್ ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಜೂನ್ 2022ರಲ್ಲಿ ಫರೂಕಾಬಾದ್ ಜಿಲ್ಲೆಯ ಕಾಯಮ್‌ಗಂಜ್ ಉಪವಿಭಾಗ-II ರಲ್ಲಿ ಸೇವೆಗೆ ನಿಯೋಜಿಸಿದ್ದಾಗ ಗೌತಮ್ ಫೋಟೋ ಹಾಕಿದ್ದು, ಕೊಠಡಿಯ ವಿಡಿಯೋ ವೈರಲ್ ಆದ ನಂತರ ಪ್ರಾಥಮಿಕ ತನಿಖೆ ನಡೆಸಿ ಆತನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು