ಉತ್ತರ ಪ್ರದೇಶ: ಪ್ರತಾಪ್ಗಢ ಜಿಲ್ಲೆಯ ಸಮಾಜವಾದಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಆತನ ಪತ್ನಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಎಸ್ಪಿ ನಾಯಕ ಫೇಸ್ಬುಕ್ನಲ್ಲಿ ನನ್ನೊಂದಿಗೆ ಸ್ನೇಹ ಬೆಳಸಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ.
ಫೇಸ್ಬುಕ್ನಲ್ಲಿ ಸ್ನೇಹ ಬೆಳಸಿ ನನ್ನ ಫೋನ್ ನಂಬರ್ ಪಡೆದು ಮಾತನಾಡಲು ಶುರುಮಾಡಿದ. ಆ ನಂತರ ನನ್ನನ್ನು ಒಂದು ದಿನ ಕರೆಸಿಕೊಂಡು ತಂಪು ಪಾನಿಯ ನೀಡಿದ್ದ. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ನಾನು ಗರ್ಭಿಣಿಯಾಗಿದ್ದೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಆತನ ಹೆಂಡತಿ ಮಧ್ಯಪ್ರವೇಶ ಮಾಡಿ ಗರ್ಭಪಾತ ಮಾಡಿಸಿದ್ದಾಳೆ. ಇದೀಗ ಅಂದು ನನ್ನನ್ನು ರೇಪ್ ಮಾಡಿದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ ಎಂದು ಆರೋಪಿಸಿದ್ದಾಳೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಅಧಿಕಾರಿ ದುರ್ಗೇಶ್ ಕುಮಾರ್, ಯುವತಿ ನೀಡಿರುವ ದೂರಿನನ್ವಯ ತನಿಖೆ ನಡೆಸಿದಾಗ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ತಪ್ಪಿತಸ್ಥ ಎಂಬುವುದು ದೃಢವಾಗಿದೆ. ಇದರನ್ವಯ ಪಿಸಿ ಸೆಕ್ಷನ್ 366, 376 (ಅತ್ಯಾಚಾರ), ಸಮ್ಮತಿ ಇಲ್ಲದೇ ಗರ್ಭಪಾತ, 504, ಬೆದರಿಕೆ, ಅಪರಾಧ ಪಿತೂರಿ ಅಡಿಯಲ್ಲಿ ಕೇಸ್ ದಾಖಲಾಗಿದೆ ಎಂದರು.